ಸುದ್ದಿ 

ಯೋಗ ಸಾಧನೆ: ತನುಶ್ರೀ ಪಿತ್ರೋಡಿ 50 ನಿಮಿಷದಲ್ಲಿ 333 ಆಸನಗಳು, ಹತ್ತನೇ ವಿಶ್ವದಾಖಲೆ!

Taluknewsmedia.com

ಯೋಗ ಸಾಧನೆ: ತನುಶ್ರೀ ಪಿತ್ರೋಡಿ 50 ನಿಮಿಷದಲ್ಲಿ 333 ಆಸನಗಳು, ಹತ್ತನೇ ವಿಶ್ವದಾಖಲೆ!

ಯೋಗ ಕ್ಷೇತ್ರದಲ್ಲಿ ಮತ್ತೊಂದು ಅಸಾಧಾರಣ ಸಾಧನೆ ಮಾಡಿದ ತನುಶ್ರೀ ಪಿತ್ರೋಡಿ, ಕೇವಲ 50 ನಿಮಿಷಗಳಲ್ಲಿ 333 ಯೋಗಾಸನಗಳನ್ನು ಪೂರೈಸಿ ತಮ್ಮ ಹತ್ತನೇ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

ಈ ಸಾಧನೆಯು ಬಹರೈನ್ ಕನ್ನಡ ಸಂಘದ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಅವರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ಗೆ ಅಧಿಕೃತವಾಗಿ ಸೇರ್ಪಡೆಯಾದರು.

ಹಿಂದಿನ ಬಾರಿ ಅವರು ಅದಮಾರು ಪರ್ಯಾಯದ ಸಂದರ್ಭದಲ್ಲಿ 45 ನಿಮಿಷಗಳಲ್ಲಿ 245 ಯೋಗಾಸನಗಳನ್ನು ಮಾಡಿ ವಿಶ್ವದಾಖಲೆ ಬರೆದಿದ್ದರು. ಇದೀಗ, ತಮ್ಮದೇ ಹಿಂದಿನ ದಾಖಲೆಯನ್ನು ಮುರಿದು ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಹರೈನ್ ಯೋಗ ಅಸೋಸಿಯೇಶನ್ ಅಧ್ಯಕ್ಷೆ ಫಾತಿಮಾ ಅಲ್ ಮನ್ಸೂರಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನ ಮನೀಶ್ ಬಿಷ್ಣೋಯಿ, ಬಹರೈನ್ ಇಂಡಿಯನ್ ಸ್ಕೂಲ್ ಚೇರ್ಮನ್ ಬಿನು ಮನ್ನಿಲ್ ವರ್ಗೀಸ್, ಬೆಹರಿನ್ ಕೇರಳೀಯ ಸಮಾಜಮ್ ಅಧ್ಯಕ್ಷ ಪಿ.ವಿ. ರಾಧಾಕೃಷ್ಣ ಪಿಳ್ಳೆ, ಬಹರೈನ್ ಇಂಡಿಯನ್ ಕ್ಲಬ್ ಅಧ್ಯಕ್ಷ ಜೋಸೆಫ್ ಜಾಯ್, ಯುನಿಕೋ ಗ್ರೂಪ್ ಸಿಇಒ ಜಯಶಂಕರ್ ವಿಶ್ವನಾಥನ್, ಹಾಗೂ ಸಂಧ್ಯಾ–ಉದಯ್ ದಂಪತಿ, ರಾಘವೇಂದ್ರ ದೇವಾಡಿಗ, ರೀತುಶ್ರೀ, ರಾಮ್ ಪ್ರಸಾದ್ ಅಮ್ಮೆನಡ್ಕ, ನಿತಿನ್ ಶೆಟ್ಟಿ, ಈಶ್ವರ್ ಅಂಚನ್, ಹರಿನಾಥ್ ಸುವರ್ಣ, ಹರಿಣಿ ಶೆಟ್ಟಿ, ಪುಲಕೇಶಿ, ಹರೀಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

ತನುಶ್ರೀ ಪಿತ್ರೋಡಿ ಅವರ ಈ ಸಾಧನೆ ಯೋಗಾಭ್ಯಾಸದಲ್ಲಿ ತಾಳ್ಮೆ, ಶಿಸ್ತಿನ ಹಾಗೂ ನಿಷ್ಠೆಯ ಉನ್ನತ ಉದಾಹರಣೆಯಾಗಿದೆ.

Related posts