ಹಾವೇರಿ: ಬಕೆಟ್ ಗೆ ಬಿದ್ದು ಮಗು ದಾರುಣ ಸಾವು
ಹಾವೇರಿ: ಬಕೆಟ್ ಗೆ ಬಿದ್ದು ಮಗು ದಾರುಣ ಸಾವು
ಹಾವೇರಿ ಜಿಲ್ಲೆಯ ಶಿವಬಸವನಗರದಲ್ಲಿ ನಡೆದ ದಾರುಣ ಘಟನೆ ಎಲ್ಲರ ಮನಸ್ಸನ್ನೂ ಬೆಚ್ಚಿಬೀಳಿಸಿದೆ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಬಕೆಟ್ನಲ್ಲಿ ನೀರು ಇದ್ದುದನ್ನು ಗಮನಿಸದೇ, ಒಂದು ವರ್ಷದ ದಕ್ಷಿತ್ ಯಳಂಬಲ್ಲಿಮಠ ಬಕೆಟ್ಗೆ ತಲೆ ಕೆಳಗಾಗಿ ಬಿದ್ದಿದ್ದಾನೆ.
ಆಟದ ಮಧ್ಯೆ ಸಂಭವಿಸಿದ ಈ ಘಟನೆ ಗಮನಿಸಿದ ಹೆತ್ತವರು ಗಾಬರಿಗೊಂಡು ಓಡಿ ಬಂದಿದ್ದಾರೆ. ಆದರೆ, ಆಗಲೇ ದಕ್ಷಿತ್ ಪ್ರಜ್ಞೆ ತಪ್ಪಿದ್ದ. ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಈ ದುಃಖದ ಘಟನೆಯ ಹಿನ್ನೆಲೆಯಲ್ಲಿ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡುವಂತ ಘಟನೆ ಇದು. ಬಕೆಟ್, ಟಬ್, ನೀರಿನ ಟ್ಯಾಂಕ್ ಮುಂತಾದವುಗಳಲ್ಲಿ ಅಲ್ಪ ಪ್ರಮಾಣದ ನೀರು ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

