ಬ್ಯಾಂಕಾಕ್ನಿಂದ ಕಾನೂನು ವಿರೋಧಿ ಪ್ರಾಣಿಸಂಗ್ರಹ – ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ
ಬ್ಯಾಂಕಾಕ್ನಿಂದ ಕಾನೂನು ವಿರೋಧಿ ಪ್ರಾಣಿಸಂಗ್ರಹ – ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ
ಬೆಂಗಳೂರು: ಬ್ಯಾಂಕಾಕ್ನಿಂದ ಕಾನೂನು ಉಲ್ಲಂಘಿಸಿ ಪ್ರಾಣಿಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
27 ವರ್ಷದ ಪ್ರಯಾಣಿಕನ ಬ್ಯಾಗ್ ಪರಿಶೀಲನೆಯಾಗಿದ್ದಾಗ, ಲಗೇಜ್ನಲ್ಲಿ ಅಕ್ರಮ ಪ್ರಾಣಿ ಸಾಗಣೆ ಪತ್ತೆಯಾಗಿತ್ತು. ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಲಗೇಜ್ ಜೊತೆಗೆ ವಶಪಡಿಸಿಕೊಂಡು, ಪ್ರಕರಣ ದಾಖಲಾಗಿದ್ದು ಮುಂದಿನ ವಿಚಾರಣೆಗೆ ಒಳಪಡಿಸಿದ್ದಾರೆ. ಯುವಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

