ಕೆ.ಆರ್. ಸಾಗರ ಬೃಂದಾವನದಲ್ಲಿ ದುರಂತ
ಕೆ.ಆರ್. ಸಾಗರ ಬೃಂದಾವನದಲ್ಲಿ ದುರಂತ
ಹಿಂಬದಿ ಚಲಿಸಿದ ಬಸ್ ಮಹಿಳೆಯ ಸಾವುಗೆ ಕಾರಣ
ಮಂಡ್ಯ: ಕೆ.ಆರ್. ಸಾಗರದ ಬೃಂದಾವನ ಉದ್ಯಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ದುರಂತದಲ್ಲಿ ಕೇರಳ ಮೂಲದ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಕೇರಳದ ಕೊಲ್ಲಂ ಹತ್ತಿರದ ಗ್ರಾಮದ ನಿವಾಸಿ ಕೌಸಲ್ಯ ಎಂಬವರು. ಗಾಯಗೊಂಡಿರುವ ನಾರಾಯಣಿ ಅವರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಮಾಹಿತಿಯ ಪ್ರಕಾರ, ಬೃಂದಾವನ ವೀಕ್ಷಣೆ ಮುಗಿಸಿಕೊಂಡು ಪ್ರವಾಸಿಗರು ಊಟ ಮಾಡುತ್ತಿದ್ದ ವೇಳೆ, ಕೇರಳದ ಕೊಪ್ಪಂನಿಂದ ವಿದ್ಯಾರ್ಥಿಗಳನ್ನು ಕರೆತಂದಿದ್ದ ಬಸ್ ಚಾಲಕ ಬ್ರೇಕ್ ತೆಗೆದು ಮುಂದಕ್ಕೆ ಚಲಿಸಲು ಯತ್ನಿಸಿದಾಗ ಬಸ್ ಏಕಾಏಕಿ ಹಿಂಬದಿ ಚಲಿಸಿತು. ಈ ವೇಳೆ ಹಿಂಭಾಗದಲ್ಲಿ ಊಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಪಡಿಸಿತು.
ತಕ್ಷಣ ಬಸ್ನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೌಸಲ್ಯ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕೆ.ಆರ್. ಸಾಗರ ಠಾಣೆಯ ಪಿ.ಎಸ್.ಐ ರಮೇಶ್ ಕರಕಿಕಟ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರವಾಸಿಗರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

