ಇವತ್ತಿನಿಂದಲೇ ಪೊಲೀಸ್ ಇಲಾಖೆಗೆ ಹೊಸ ಸ್ಪರ್ಶ.. ಹಳೇ ‘ಸ್ಲೋಚ್ ಕ್ಯಾಪ್’ ಬದಲು ಹೊಸ ‘ಪೀಕ್ ಕ್ಯಾಪ್’.. ಸಿಎಂ ಸಿದ್ದು ಚಾಲನೆ!
ಇವತ್ತಿನಿಂದಲೇ ಪೊಲೀಸ್ ಇಲಾಖೆಗೆ ಹೊಸ ಸ್ಪರ್ಶ.. ಹಳೇ ‘ಸ್ಲೋಚ್ ಕ್ಯಾಪ್’ ಬದಲು ಹೊಸ ‘ಪೀಕ್ ಕ್ಯಾಪ್’.. ಸಿಎಂ ಸಿದ್ದು ಚಾಲನೆ!
ರಾಜ್ಯ ಪೊಲೀಸ್ ಸಿಬ್ಬಂದಿಯ ಸಮವಸ್ತ್ರಕ್ಕೆ ಹೊಸ ನೋಟ ನೀಡುವ ನಿಟ್ಟಿನಲ್ಲಿ, ದಶಕಗಳಿಂದ ಬಳಕೆಯಲ್ಲಿದ್ದ ‘ಸ್ಲೋಚ್ ಕ್ಯಾಪ್’ ಬದಲಿಗೆ ‘ಪೀಕ್ ಕ್ಯಾಪ್‘ಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದ್ದು, ಈ ಕ್ಯಾಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬೆಳಗ್ಗೆ 11 ಗಂಟೆಗೆ ಈ ಮಹತ್ವದ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವರಾದ ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. ಅಲ್ಲದೆ, ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಇಂದು ವಿತರಿಸಲಾಗುವ ಈ ಹೊಸ ‘ಪೀಕ್ ಕ್ಯಾಪ್’ಗಳು ತೆಲಂಗಾಣ ಪೊಲೀಸ್ ಮಾದರಿಯ ವಿನ್ಯಾಸವನ್ನು ಹೊಂದಿವೆ. ಬ್ರಿಟಿಷರ ಕಾಲದಿಂದಲೂ ಬಳಕೆಯಲ್ಲಿದ್ದ ಸ್ಲೋಚ್ ಕ್ಯಾಪ್ಗಳನ್ನು ಇಂದಿನಿಂದಲೇ ಬದಲಾಯಿಸಿ, ಹೊಸ ಪೀಕ್ ಕ್ಯಾಪ್ಗಳನ್ನು ಧರಿಸಲು ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ.

