ಸುದ್ದಿ 

ಚಿಕ್ಕೋಡಿಯಲ್ಲಿ ಪರಸ್ತ್ರೀಯೊಂದಿಗೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಪತಿರಾಯ — ಪತ್ನಿಯಿಂದ ರಸ್ತೆ ಮಧ್ಯೆ ಧರ್ಮದೇಟು!

Taluknewsmedia.com

ಚಿಕ್ಕೋಡಿಯಲ್ಲಿ ಪರಸ್ತ್ರೀಯೊಂದಿಗೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಪತಿರಾಯ — ಪತ್ನಿಯಿಂದ ರಸ್ತೆ ಮಧ್ಯೆ ಧರ್ಮದೇಟು!

ಬೆಳಗಾವಿ: ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದ್ದ ಜನರು ಶಾಕ್ ಆಗಿದ್ದಾರೆ. ಪತಿ ಪರಸ್ತ್ರೀಯೊಂದಿಗೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದಿದ್ದು, ಪತ್ನಿಯು ಲಾಡ್ಜ್‌ನಿಂದಲೇ ಎಳೆದು ಸಾರ್ವಜನಿಕವಾಗಿ ಚಪ್ಪಲಿಯಿಂದ ಧರ್ಮದೇಟು ನೀಡಿದ ಘಟನೆ ನಡೆದಿದೆ.

ಮಾಹಿತಿ ಪ್ರಕಾರ, ಚಿಕ್ಕೋಡಿಯ ಅವಿನಾಶ್ ಭೋಸಲೆ ಎಂಬ ವ್ಯಕ್ತಿ ಪರಸ್ತ್ರೀಯೊಂದಿಗೆ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಸಮಯ ಕಳೆಯುತ್ತಿದ್ದ. ಈ ವಿಷಯ ತಿಳಿದ ಪತ್ನಿ ಹಾಗೂ ಮಾವ ಸ್ಥಳಕ್ಕೇ ಬಂದು ಪತಿಯನ್ನು ಲಾಡ್ಜ್‌ನಿಂದ ಎಳೆದು ಹೊರತೆಗೆದರು. ನಂತರ ಪತ್ನಿಯು ಚಪ್ಪಲಿಯಿಂದ ಪತಿಯನ್ನ ಉಳ್ಳಾಡಿಸಿ ಹೊಡೆದ ದೃಶ್ಯಗಳು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದವು.

ಅವಿನಾಶ್ ಹಾಗೂ ಪತ್ನಿಯ ನಡುವೆ ಕಳೆದ ನಾಲ್ಕು ವರ್ಷಗಳಿಂದ ಗಂಭೀರ ಅಸಮಾಧಾನವಿದ್ದು, ವಿಚ್ಛೇದನಕ್ಕಾಗಿ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದೆ ಎಂದು ತಿಳಿದುಬಂದಿದೆ.

ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರ ತನಿಖೆ ಪ್ರಗತಿಯಲ್ಲಿದೆ.

ಈ ಘಟನೆ ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, “ನಿಜಕ್ಕೂ ಪತಿಯ ನಡವಳಿಕೆಗೆ ಪತ್ನಿಯ ಕೋಪವೂ ಅರ್ಥಪೂರ್ಣ” ಎಂದು ಕೆಲವರು ಹೇಳಿಕೊಂಡರೆ, “ಇಂತಹ ಘಟನೆಗಳು ಸಾರ್ವಜನಿಕವಾಗಿ ನಡೆಯುವುದು ಕುಟುಂಬದ ಗೌರವಕ್ಕೆ ಧಕ್ಕೆ” ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Related posts