ಸುದ್ದಿ 

ರೈತನ ಆರ್ಥಿಕ ಬಿಕ್ಕಟ್ಟು: ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ..

Taluknewsmedia.com

ರೈತನ ಆರ್ಥಿಕ ಬಿಕ್ಕಟ್ಟು: ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ..

ಕೆಂಭಾವಿ : ಸಮೀಪದ ತಳ್ಳಳ್ಳಿ (ಬಿ) ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ, ಸಾಲಬಾಧೆಯಿಂದ ಕಂಗೆಟ್ಟ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ತಳ್ಳಳ್ಳಿ (ಬಿ) ಗ್ರಾಮದ ನಿವಾಸಿ ಹಣಮಂತ್ರಾಯ ಯಮನಪ್ಪ ಬಿರೆದಾರ್ (41) ಎನ್ನುವವರು ಬದುಕಿನ ಕಷ್ಟ ತಾಳಲಾರದೆ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತ ರೈತನಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆಂಭಾವಿ ಶಾಖೆಯಿಂದ ಸುಮಾರು ₹2.13 ಲಕ್ಷ ಸಾಲ ಬಾಕಿಯಾಗಿದ್ದು, ಜೊತೆಗೆ ಕೈಗಡ ಸಾಲದ ಒತ್ತಡವೂ ಇದ್ದು, ಇದರಿಂದ ಮಾನಸಿಕ ತೊಂದರೆಯಲ್ಲಿ ಸಿಲುಕಿದ್ದರು ಎಂಬ ಮಾಹಿತಿ ದೊರೆತಿದೆ.

ಈ ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿಯುತ್ತಿದೆ.

ಗ್ರಾಮದಲ್ಲಿ ಈ ಘಟನೆ ದುಃಖದ ವಾತಾವರಣ ನಿರ್ಮಿಸಿದೆ. ಸಹಗ್ರಾಮಸ್ಥರು ಸರ್ಕಾರವು ರೈತರ ಸಾಲಮನ್ನಾ ನೀತಿಯನ್ನು ಬಲಪಡಿಸಿ, ಇಂತಹ ದುರಂತಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Related posts