ಸುದ್ದಿ 

ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….

Taluknewsmedia.com

ಕಣಿ…….

ಕಣಿ ಹೇಳ್ತೀನಿ ಅಣ್ಣ ಕಣಿ,
ಕಣಿ ಹೇಳ್ತೀನಿ ಅಕ್ಕ ಕಣಿ,…..

ಖರೇನೇ ಹೇಳ್ತೀನಿ,
ಸುಳ್ಳಾಡಂಗಿಲ್ಲ ನಾ,

ನೋಟಿನ ಬಣ್ಣ ಬದಲಾಗೈತಿ
ಮನ್ಸರ ಬದುಕೂ ಬದಲಾಗ್ತೈತಿ,
ರಾಜನ ಪ್ರಭುತ್ವ ಕುಣಿತೈತಿ,
ಭ್ರಷ್ಟರ ಮನಸ್ಸು ಕುದಿತೈತಿ,
ಬಡವನ ಪ್ರಾಣ ಕುಸಿತೈತಿ.

ಕಣಿ ಹೇಳ್ತೀನಿ ಅಕ್ಕ ಕಣಿ,….

ತರಕಾರಿ ಮಾರೌರ್ರು –
ಹಣ್ಣು ಮಾರೌರ್ರು,
ಮೀನು ಕೋಳಿ ಮಾರೌರ್ರು –
ಪಾತ್ರೆ ಪಗಡೆ ಮಾರೌರ್ರು,
ಕೂಲಿ ಮಾಡೌರ್ರು –
ಮಂತ್ರ ತಂತ್ರ ಮಾಡೌರ್ರು,
ಕಟಿಂಗ್ ಮಾಡೌರ್ರು –
ಇಸ್ತ್ರೀ ಮಾಡೌರ್ರು,
ಬದುಕು ಕುಸಿತೈತಿ….

ಕಂಪ್ಯೂಟರ್ ಮಾರೌರ್ರು –
ಆನ್ ಲೈನ್ ವ್ಯಾಪಾರ ಮಾಡೌರ್ರು,
ಈಗಾಗ್ಲೇ ಕಲಿತೌರ್ರು –
ಒಂದಕ್ಕೆರಡು ಲಾಭ ಮಾಡೌರ್ರು,
ದಲ್ಲಾಳಿ ಮಾಡೌರ್ರು
ಬದುಕು ಕುಣಿತೈತಿ.

ಕಣಿ ಹೇಳ್ತೀನಿ ತಾಯಿ ಕಣಿ,……

ಕಾಂಚಾನ ಕುಣಿತೈತಿ –
ಮನ್ಸತ್ವ ನೆಗಿತೈತಿ,
ರಾಜಾನ ಕನಸು ದೊಡ್ಡದೈತಿ,
ಬಡವನ ಆಯಸ್ಸು ಸಣ್ಣದೈತಿ,….

ನೂರ್ಕಳ್ರು ತಪ್ಪಿಸ್ಕಂಡ್ರು ಅಮಾಯಕನಿಗೆ ಹೊಡಿಬ್ಯಾಡ್ರಿ ಅಂತೈತಿ,
ಕಾಲ ಬದಲಾಗೈತಿ,
ಒಬ್ ಕಳ್ಳನ್ ಹಿಡಿಯಾಕ ಸಾವ್ರ ಅಮಾಯಕ್ರಿಗೆ ಹೊಡ್ದೈತಿ.

ಕಣಿ ಹೇಳ್ತೀನಿ ಯಪ್ಪಾ ಕಣಿ,….

ಬಡವಾನ ಮನ್ಸಾಗ ಗೊಂದಲೈತಿ,
ವ್ಯಾಪಾರಿ ಮುಖದಾಗ ನಗುವೈತಿ,
ಹಾಲು ವಿಷವಾಗ್ತೈತಿ –
ಕಾಲ ಉರುಳಾಗ್ತೈತಿ,
ಕಳ್ರು ಸುಳ್ರು ಜಾಸ್ತಿಯಾಗ್ತೈತಿ,
ಪೂಜೆ ಪುನಸ್ಕಾರ ಹೆಚ್ಚಾಗ್ತೈತಿ,…

ಹೆಂಗಸ್ರ ಕಷ್ಟ ಜಾಸ್ತಿ ಆಗತೈತಿ,
ಗಂಡಸ್ರ ತೆವಲು ಕೆರಳತೈತಿ,
ಮಕ್ಕಳ ಬುದ್ದಿ ಕೆಡತೈತಿ,
ಕೋತಿ ರಾಜ್ಯ ಆಗತೈತಿ….

ಸುಳ್ಳು ನಿಜ ಆಗತೈತಿ,
ನಿಜ ಹಾಳಾಗಿ ಹೋಗತೈತಿ,
ನಂಬ್ಕೆ ಸತ್ತೋಗ್ತೈತಿ,
ನೆಮ್ಮದಿ ಮಾಯಾ ಆಗತೈತಿ…

ರಾಜನ್ಗೂ ಕುತೈತಿ –
ಬಡವನ್ಗೂ ಕುತೈತಿ,
ಕಲಿಗಾಲ ಮುಗಿತೈತಿ.
ಯಮಕಾಲ ಬರುತೈತಿ….

ಹುಷ್ಷಾರ್ರಿ ಅಣ್ಣ ಹುಷ್ಷಾರ್ರಿ ಅಕ್ಕ
ಹುಷ್ಷಾರ್ರಿ ಅಪ್ಪ ಹುಷ್ಷಾರ್ರಿ ಅವ್ವ,

ಬದಲಾಗ್ಲಿ ಮನ್ಸು – ಬದಲಾಗ್ಲಿ ಮನ್ಷ್ಯ,
ಆಗ ಕಾಣ್ತೈತಿ ಮನ್ಸಾಗೆ ಖುಸಿ….

ಕೆಟ್ಟೋರ್ ಆಗ್ ಬ್ಯಾಡ್ರಿ,
ಚಲೋ ಯೋಚನೇ ಮಾಡ್ರಿ….

ಕಣಿ ಹೇಳ್ತೀನಿ ನಾ ಕಣಿ,

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

Related posts