ಅಂಕಣ 

ಒಂದು ಅಪಘಾತ……..

Taluknewsmedia.com

Taluknewsmedia.comಒಂದು ಅಪಘಾತ…….. ನಿನ್ನೆ ಒಂದು ಅಪಘಾತವಾದ ಸುದ್ದಿ ತಿಳಿಯಿತು. ಅದರಲ್ಲಿ 40 ವರ್ಷದ ಗಂಡ ಮತ್ತು ಆತನ 35 ವರ್ಷದ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರಿಗೆ ಐದು, ಏಳು ಮತ್ತು ಹತ್ತು ವರ್ಷದ ಮೂವರು ಮಕ್ಕಳಿದ್ದಾರೆ. ಬೇರೆ ಊರಿನಿಂದ ಬೆಂಗಳೂರಿಗೆ ಬಂದು ಬಟ್ಟೆ ಅಂಗಡಿ ಇಟ್ಟುಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬವದು. ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸಿ ನೋಡಿ, 5, 7 ಮತ್ತು 10 ವರ್ಷದ ಗಂಡು-ಹೆಣ್ಣು ಮಕ್ಕಳು ಮನೆಯಲ್ಲಿ ಶಾಲಾ ಪುಸ್ತಕ ಓದುತ್ತಲೋ, ಟಿವಿ ನೋಡುತ್ತಲೋ, ಆಟವಾಡುತ್ತಲೋ ತಮ್ಮ ಅಪ್ಪ ಅಮ್ಮ ರಾತ್ರಿ ಮನೆಗೆ ಬರುತ್ತಾರೆ ಎಂದು ನಿರೀಕ್ಷಿಸುತ್ತಾ ಅವರದೇ ಲೋಕದಲ್ಲಿ ಮುಳುಗಿರುತ್ತಾರೆ. ಕೆಲವರು ಮೊಬೈಲಿನಲ್ಲಿ ಆಟವಾಡುತ್ತಿರುತ್ತಾರೆ,ಕೆಲವರು ಟ್ಯೂಷನ್ ಗೂ ಹೋಗಿರಬಹುದು. ಒಟ್ಟಿನಲ್ಲಿ ಅಪ್ಪ-ಅಮ್ಮನನ್ನು ಮೊಬೈಲಿನಲ್ಲಿ ಸಂಪರ್ಕಿಸುತ್ತಾ ಅವರ ನಿರೀಕ್ಷೆಯಲ್ಲಿ ಇರುತ್ತಾರೆ. ಆಗ ಇದ್ದಕ್ಕಿದ್ದಂತೆ ಅವರಿಗೆ ಪೊಲೀಸರು ಮೂಲಕವೋ ಅಥವಾ ಅವರ ನೆಂಟರಿಷ್ಟರ…

ಮುಂದೆ ಓದಿ..
ಸುದ್ದಿ 

ಇವರೆಂತಹ ಸ್ವಾಮಿಗಳು,

Taluknewsmedia.com

Taluknewsmedia.comಇವರೆಂತಹ ಸ್ವಾಮಿಗಳು, ಪರಿವರ್ತನೆಯ ಅಗತ್ಯವಿದೆ……. ಹಿಂದೂ ಧರ್ಮದ ಅಥವಾ ಮತದ ಅಥವಾ ಜೀವನ ವಿಧಾನದ ಅಥವಾ ಭಾರತೀಯ ಧಾರ್ಮಿಕ – ಆಧ್ಯಾತ್ಮಿಕ ಜೀವನದ ,ಸ್ವಾಮೀಜಿ – ಮಹರ್ಷಿ – ಗುರೂಜಿ – ಮಠಾಧಿಪತಿ – ಪೀಠಾಧಿಪತಿ – ಧರ್ಮಾಧಿಕಾರಿ ಎಂಬ ಪರಿಕಲ್ಪನೆಯನ್ನು ಬದಲಾಯಿಸೋಣವೇ ?ಅಥವಾಆ ರೀತಿಯ ವ್ಯಕ್ತಿಗಳ ವ್ಯಕ್ತಿತ್ವಗಳನ್ನು ಪುನರ್ ರೂಪಿಸೋಣವೇ ? ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ಕಾವಿಧಾರಿ ಸ್ವಾಮಿಗಳು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ತುಂಬಾ ಗಾಬರಿ ಮೂಡಿಸಿದೆ……… ಕೆಲವೊಮ್ಮೆ ಅತಿಯಾದ ಕುಡುಕರು, ಅರೆ ಹುಚ್ಚರು, ತೀರಾ ಅಂಧಾಭಿಮಾನಿಗಳು, ಉಡಾಫೆ ವ್ಯಕ್ತಿತ್ವದವರು, ಭಟ್ಟಂಗಿಗಳು ಮಾತನಾಡುವುದನ್ನು ಕೇಳಿದ್ದೇವೆ. ಅವರು ಹಿಂದೆ ಮುಂದೆ ನೋಡದೆ ಬಾಯಿಗೆ ಬಂದಂತೆ ಯಾರನ್ನೋ ಇಂದ್ರ ಚಂದ್ರ ಎನ್ನುತ್ತಾರೆ ಇಲ್ಲವೇ ಕೆಟ್ಟ ಕೊಳಕು ಮಾತುಗಳಲ್ಲಿ ನಿಂದಿಸುತ್ತಾರೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರನ್ನು ಸಹಜ ಮನಸ್ಥಿತಿಯ ಆರೋಗ್ಯವಂತ ವ್ಯಕ್ತಿಗಳು ಎಂದು…

ಮುಂದೆ ಓದಿ..
ಅಂಕಣ 

ಒಂದಷ್ಟು ನೆಮ್ಮದಿಗಾಗಿ……….

Taluknewsmedia.com

Taluknewsmedia.comಒಂದಷ್ಟು ನೆಮ್ಮದಿಗಾಗಿ………. ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ ವಿರುದ್ಧವಾಗಿ ಘಟಿಸುತ್ತಿದೆಯೇ ? ಮಾಧ್ಯಮ, ಗೆಳೆತನ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಂಬಿಕೆಗೆ ವಿರೋಧ ವ್ಯಕ್ತವಾಗುತ್ತಿದೆಯೇ ? ಧರ್ಮ ಜಾತಿ ಭಾಷೆ ಹಣಕಾಸು ಪಕ್ಷ ಸಂಪ್ರದಾಯ ಸಿದ್ದಾಂತಗಳ ವಿಷಯದಲ್ಲಿ ಏನೋ ಒಂತರಾ ಕಸಿವಿಸಿ ಎನಿಸುವಂತೆ ಮನಸ್ಸಿಗೆ ತುಮಲವಾಗುತ್ತಿದೆಯೇ ? ಕೆಲವು ವಿಷಯಗಳ ಬಗ್ಗೆ ಬೇಗ ಕೋಪ ಬಂದು ಪ್ರತಿಕ್ರಿಯಿಸಿ ವಿರೋಧಿಗಳ ಸದ್ದಡಗಿಸಬೇಕು ಎಂಬ ಅಭಿಪ್ರಾಯ ಉಂಟಾಗಿ ಬಿಪಿ ಏರಿಕೆಯಾಗುತ್ತದೆಯೇ ????????? ಈ ರೀತಿಯ ಕೆಲವು ಅಥವಾ ಎಲ್ಲವೂ ನಿಮ್ಮಲ್ಲಿ ಉಂಟಾಗುತ್ತಿದ್ದರೆ ಅದನ್ನು ನಿಯಂತ್ರಿಸಿಕೊಳ್ಳಲು ಕೆಲವು ಸಲಹೆ ರೂಪದ ಕಿವಿಮಾತುಗಳು ನಿಮಗಾಗಿ…….. ನಿಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಂಡರೆ ಖಂಡಿತವಾಗಿ ಈ ಸಮಸ್ಯೆಗಳಿಗೆ ಸಹಜ ಸ್ವಾಭಾವಿಕವಾಗಿ ಪರಿಹಾರ…

ಮುಂದೆ ಓದಿ..
ಸುದ್ದಿ 

ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….

Taluknewsmedia.com

Taluknewsmedia.comಕಣಿ……. ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….. ಖರೇನೇ ಹೇಳ್ತೀನಿ,ಸುಳ್ಳಾಡಂಗಿಲ್ಲ ನಾ, ನೋಟಿನ ಬಣ್ಣ ಬದಲಾಗೈತಿಮನ್ಸರ ಬದುಕೂ ಬದಲಾಗ್ತೈತಿ,ರಾಜನ ಪ್ರಭುತ್ವ ಕುಣಿತೈತಿ,ಭ್ರಷ್ಟರ ಮನಸ್ಸು ಕುದಿತೈತಿ,ಬಡವನ ಪ್ರಾಣ ಕುಸಿತೈತಿ. ಕಣಿ ಹೇಳ್ತೀನಿ ಅಕ್ಕ ಕಣಿ,…. ತರಕಾರಿ ಮಾರೌರ್ರು –ಹಣ್ಣು ಮಾರೌರ್ರು,ಮೀನು ಕೋಳಿ ಮಾರೌರ್ರು –ಪಾತ್ರೆ ಪಗಡೆ ಮಾರೌರ್ರು,ಕೂಲಿ ಮಾಡೌರ್ರು –ಮಂತ್ರ ತಂತ್ರ ಮಾಡೌರ್ರು,ಕಟಿಂಗ್ ಮಾಡೌರ್ರು –ಇಸ್ತ್ರೀ ಮಾಡೌರ್ರು,ಬದುಕು ಕುಸಿತೈತಿ…. ಕಂಪ್ಯೂಟರ್ ಮಾರೌರ್ರು –ಆನ್ ಲೈನ್ ವ್ಯಾಪಾರ ಮಾಡೌರ್ರು,ಈಗಾಗ್ಲೇ ಕಲಿತೌರ್ರು –ಒಂದಕ್ಕೆರಡು ಲಾಭ ಮಾಡೌರ್ರು,ದಲ್ಲಾಳಿ ಮಾಡೌರ್ರುಬದುಕು ಕುಣಿತೈತಿ. ಕಣಿ ಹೇಳ್ತೀನಿ ತಾಯಿ ಕಣಿ,…… ಕಾಂಚಾನ ಕುಣಿತೈತಿ –ಮನ್ಸತ್ವ ನೆಗಿತೈತಿ,ರಾಜಾನ ಕನಸು ದೊಡ್ಡದೈತಿ,ಬಡವನ ಆಯಸ್ಸು ಸಣ್ಣದೈತಿ,…. ನೂರ್ಕಳ್ರು ತಪ್ಪಿಸ್ಕಂಡ್ರು ಅಮಾಯಕನಿಗೆ ಹೊಡಿಬ್ಯಾಡ್ರಿ ಅಂತೈತಿ,ಕಾಲ ಬದಲಾಗೈತಿ,ಒಬ್ ಕಳ್ಳನ್ ಹಿಡಿಯಾಕ ಸಾವ್ರ ಅಮಾಯಕ್ರಿಗೆ ಹೊಡ್ದೈತಿ. ಕಣಿ ಹೇಳ್ತೀನಿ ಯಪ್ಪಾ ಕಣಿ,…. ಬಡವಾನ ಮನ್ಸಾಗ ಗೊಂದಲೈತಿ,ವ್ಯಾಪಾರಿ ಮುಖದಾಗ ನಗುವೈತಿ,ಹಾಲು ವಿಷವಾಗ್ತೈತಿ –ಕಾಲ ಉರುಳಾಗ್ತೈತಿ,ಕಳ್ರು…

ಮುಂದೆ ಓದಿ..
ಅಂಕಣ 

ತಾಯಿ ಭಾಷೆ…..ಕನ್ನಡ ರಾಜ್ಯೋತ್ಸವ……..

Taluknewsmedia.com

Taluknewsmedia.comತಾಯಿ ಭಾಷೆ….. ಕನ್ನಡ ರಾಜ್ಯೋತ್ಸವ…….. ಕರ್ನಾಟಕ ಎಂಬುದೇನುಹೆಸರೇ ಬರಿಯ ಮಣ್ಣಿಗೆ,ಮಂತ್ರ ಕಣಾ ಶಕ್ತಿ ಕಣಾತಾಯಿ ಕಣಾ ದೇವಿ‌ ಕಣಾಬೆಂಕಿ ಕಣಾ ಸಿಡಿಲು ಕಣಾಕಾವ ಕೊಲುವ ಒಲವ ಬಲವಾಪಡೆದ ಚೆಲುವ ಚೆಂಡಿ ಕಣಾಋಷಿಯ ಕಾಣ್ಬ ಕಣ್ಣಿಗೆ,ರಾಷ್ಟ್ರ ಕವಿ ಕುವೆಂಪು…. ತಾಯಿ ಭಾಷೆ ಉಳಿಯದಿದ್ದರೆ ನಮ್ಮ ಬದುಕು ಸಹಜವಾಗಿ ಉಳಿಯುವುದು ಕಷ್ಟ. ಅದು ಅಸಹಜವಾಗಿ ಬೆಳೆಯುತ್ತದೆ. ಭಾಷೆ ಎಂಬುದು ಭಾವ ಕಡಲು,ಭಾಷೆ ಎಂಬುದು ಒಡಲಾಳದ ಉಸಿರು,ಭಾಷೆ ಎಂಬುದು ಸಂಸ್ಕೃತಿಯ ಬೇರು, ಭಾಷೆ ಎಂಬುದು ಸಂಪರ್ಕ ಮಾಧ್ಯಮ,ಭಾಷೆ ಎಂಬುದು ಸಾಂಸ್ಕೃತಿಕ ವಾಹಕ, ಭಾಷೆ ಎಂಬುದು ಜ್ಞಾನದ ಹೆಬ್ಬಾಗಿಲು, ಭಾಷೆ ಎಂಬುದು ಬದುಕು ರೂಪಿಸುವ ಸಾಧನ,ಒಟ್ಟಾರೆ ಭಾಷೆ ಎಂಬುದು ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನ ಜೀವದ್ರವ್ಯ……….. ನವಂಬರ್ ೧ ಕನ್ನಡ ರಾಜ್ಯೋತ್ಸವ…. ಭಾರತದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆ ಸ್ಥಾಪಿತವಾಗಿರುವುದೇ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ. ಭಾಷೆಯೇ ಇಲ್ಲಿನ ಬಹುತ್ವ ಸಂಸ್ಕೃತಿಯ ಪ್ರತಿಬಿಂಬ. ಕನ್ನಡ ನಮ್ಮ…

ಮುಂದೆ ಓದಿ..
ಅಂಕಣ 

ರೇಷನ್ ಕಾರ್ಡ್ ಬಡವರು ಮತ್ತು ನಿಜ ನಿರ್ಗತಿಕರು ?

Taluknewsmedia.com

Taluknewsmedia.comರೇಷನ್ ಕಾರ್ಡ್ ಬಡವರು ಮತ್ತು ನಿಜ ನಿರ್ಗತಿಕರು ? ಬಡತನ ಎಂದರೇನು ? ಬಡವರು ಎಂದರೆ ಯಾರು ? ತಿನ್ನಲು ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವವರು ಬಡವರೇ,ಊಟವಿದ್ದೂ ಮೈತುಂಬ ಬಟ್ಟೆ ಇಲ್ಲದೆ ಹರಿದ ಬಟ್ಟೆ ಹಾಕಿರುವ ಜನರು ಬಡವರೇ.ಊಟ, ಬಟ್ಟೆ ಇದ್ದು ವಾಸಿಸಲು ಸರಿಯಾದ ಜಾಗವಿಲ್ಲದ / ವಸತಿ ಇಲ್ಲದ ಜನರು ಬಡವರೇ,ಊಟ, ಬಟ್ಟೆ, ವಸತಿ ಇದ್ದು ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವವರು ಬಡವರೇ, ಊಟ, ಬಟ್ಟೆ, ವಸತಿ, ಶಿಕ್ಷಣ ಇದ್ದು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗದ ಜನರನ್ನು ಬಡವರು ಎನ್ನಬೇಕೇ ಅಥವಾ ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ ಇವುಗಳನ್ನು ಪಡೆದೂ ತನ್ನಿಷ್ಟದಂತೆ ಬದುಕಲು ಸಾಧ್ಯವಾಗದೇ ಇರುವವರು ಬಡವರೇ ಅಥವಾ ಇದೆಲ್ಲವೂ ಇದ್ದು ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದ ಮಾತ್ರಕ್ಕೆ ಅವರು ಬಡವರೇ, ನಿರ್ಧರಿಸಬೇಕಾಗಿರೋದು ಸರ್ಕಾರ, ಸಮಾಜ ಮತ್ತು ನಮ್ಮ ಆತ್ಮಸಾಕ್ಷಿ……. ಹಣ ಇದ್ದು ಗುಣ…

ಮುಂದೆ ಓದಿ..
ಅಂಕಣ 

ಕುರ್ಚಿ………

Taluknewsmedia.com

Taluknewsmedia.comಕುರ್ಚಿ……… ಅಧಿಕಾರವೆಂಬ ಅಮಲು ಮತ್ತೆೇರಿ ವಿಧವಿಧದ ಕುರ್ಚಿಗಾಗಿ ಕೆಲವು ವ್ಯಕ್ತಿಗಳು ಮುಗಿ ಬೀಳುವುದು ನೋಡಿದಾಗ ಅನಿಸಿದ್ದು……… ಕುರ್ಚಿ ಬೇಕೆ ಕುರ್ಚಿ……… ” ಆ ” ಮಾಯಾ ಕುರ್ಚಿ….. ಏರಲು ದೈವ ಬಲ ಬೇಕಂತೆ ” ಆ ” ಕುರ್ಚಿ.ಕೂರಲು ಜನ ಬಲ ಬೇಕಂತೆ ” ಆ ” ಕುರ್ಚಿ.ಪಡೆಯಲು ಹಣ ಬಲ ಬೇಕಂತೆ ” ಆ ” ಕುರ್ಚಿ.ಗಳಿಸಲು ಜಾತಿ ಬಲ ಬೇಕಂತೆ ” ಆ ” ಕುರ್ಚಿ. ಮಾನ ಮರ್ಯಾದೆ ಬಿಡಬೇಕಂತೆ ” ಆ ” ಕುರ್ಚಿ ಸಿಗಲು.ಹೋಮ ಹವನ ಮಾಡ ಬೇಕಂತೆ ” ಆ ” ಕುರ್ಚಿ ಹೊಂದಲು.ತಲೆ ಹಿಡಿಯಲು ತಲೆ ಹೊಡೆಯಲು ಸಿದ್ದರಿರಬೇಕಂತೆ ” ಆ ” ಕುರ್ಚಿ ಗೆಲ್ಲಲು.ಜುಟ್ಟು ಹಿಡಿಯಲು, ಕೈ ಮುಗಿಯಲು, ಕಾಲು ಕಟ್ಟಲು ಗೊತ್ತಿರಬೇಕಂತೆ” ಆ ” ಕುರ್ಚಿ ನಿಮ್ಮದಾಗಲು. ಸಾಮಾನ್ಯರಿಗೆ ಸಿಗದಂತೆ” ಆ ” ಕುರ್ಚಿ.ಏಳು ಜನ್ಮದ…

ಮುಂದೆ ಓದಿ..
ಅಂಕಣ 

ಭಾರತೀಕರಣ………..

Taluknewsmedia.com

Taluknewsmedia.comಭಾರತೀಕರಣ……….. ಇಸ್ಲಾಮೀಕರಣ, ಕೇಸರೀಕರಣ ಎಂಬ ಎರಡು ಸಂಘರ್ಷಗಳ ಪ್ರಸ್ತುತ ಧಾರ್ಮಿಕ, ಸಾಮಾಜಿಕ ಸನ್ನಿವೇಶಗಳಲ್ಲಿ ಭಾರತೀಕರಣ ಎಂಬ ಪರಿಹಾರ ಹೆಚ್ಚು ಸೂಕ್ತವಾದದ್ದು ಮತ್ತು ದೇಶದ ಸಮಗ್ರತೆಯನ್ನು ಕಾಪಾಡಲು ಅತ್ಯವಶ್ಯವಾದದ್ದು. ಭಾರತೀಕರಣವೆಂದರೆ ಸಂವಿಧಾನದ ಶೀರ್ಷಿಕೆಯ ಪ್ರಾರಂಭದಲ್ಲಿ ಹೇಳಿರುವ ” ಭಾರತೀಯರಾದ ನಾವು……” ಎನ್ನುವ ಘೋಷ ವಾಕ್ಯ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಎಂಬ ಸಂಘಟನೆ ವಾಸ್ತವದಲ್ಲಿ ಏನು ಮತ್ತು ಅದು ನಿಜಕ್ಕೂ ದೇಶದ ಸಮಗ್ರ ಹಿತಾಸಕ್ತಿಯನ್ನು ಬಯಸುವುದಾದರೆ ಏನು ಮಾಡಬಹುದು ಎಂಬ ಚರ್ಚೆಯ ಸುತ್ತ ಒಂದು ಪಕ್ಷಿ ನೋಟ…….. ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆಯೇ : ಹೌದು, ಆರ್ ಎಸ್ ಎಸ್ ಹಿಂದುತ್ವದ ಸಂಘಟನೆಯೇ : ಹೌದು, ಆರ್ ಎಸ್ ಎಸ್ ಸನಾತನ ಧರ್ಮದ ಸಂಘಟನೆಯೇ : ಹೌದು, ಆರ್ ಎಸ್ ಎಸ್ ವರ್ಣಾಶ್ರಮ ವ್ಯವಸ್ಥೆಯನ್ನು ಬೆಂಬಲಿಸುತ್ತದೆಯೇ : ಹೌದು, ಈಗ ಮೇಲ್ನೋಟಕ್ಕೆ ಅದನ್ನು ವಿರೋಧಿಸುತ್ತದೆ,…

ಮುಂದೆ ಓದಿ..
ಅಂಕಣ 

ಕನ್ನಡ ತಾಯಿ ಭಾಷೆಯ ಉಳಿವಿಗಾಗಿ……

Taluknewsmedia.com

Taluknewsmedia.comಕನ್ನಡ ತಾಯಿ ಭಾಷೆಯ ಉಳಿವಿಗಾಗಿ…… ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು ಮಾಡಬಹುದಾದ ಕೆಲವು ಕರ್ತವ್ಯಗಳು ನನಗೆ ತಿಳಿದಂತೆ……. ೧) ಇನ್ನು ಮುಂದೆ ಕನ್ನಡದ ಯಾವುದೇ ಪೋಷಕರಿಗೆ ಹುಟ್ಟುವ ಮಕ್ಕಳಿಗೆ ಪರಂಪರಾನುಗತವಾಗಿ ಬೆಳೆದು ಬಂದ ಕನ್ನಡ ನೆಲಕ್ಕೆ ಹೆಚ್ಚು ಹತ್ತಿರದ ಮುದ್ದಾದ” ಹೆಸರುಗಳನ್ನು ” ಆಯ್ಕೆ ಮಾಡಿಕೊಂಡು ನಾಮಕರಣ ಮಾಡುವುದು. ಅದರಿಂದಾಗಿ ಕನ್ನಡದ ಘಮಲು ಸದಾ ಪಸರಿಸುತ್ತಿರುತ್ತದೆ. ೨) ಒಂದು ವೇಳೆ ಅನಿವಾರ್ಯವಾಗಿ ಮತ್ತು ಅವಶ್ಯಕತೆಗಾಗಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು ಸಹ ಮನೆಯಲ್ಲಿ ಎಲ್ಲರೂ ಸಂಪೂರ್ಣ ಅಚ್ಚ ಕನ್ನಡದಲ್ಲಿ ಮಾತನಾಡುವುದು. ಏಕೆಂದರೆ ಈಗ ಭಾಷಾ ವಾತಾವರಣ ಬದಲಾಗಿದೆ. ಹೇಗಿದ್ದರು ಆಂಗ್ಲ ಭಾಷೆಯನ್ನು ಎಲ್ಲಾ ಮಕ್ಕಳು ಸಹಜವಾಗಿ ಕಲಿಯುತ್ತಾರೆ. ನಾವು ಕನ್ನಡ ಕಲಿಸಲು…

ಮುಂದೆ ಓದಿ..
ಸುದ್ದಿ 

ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ………

Taluknewsmedia.com

Taluknewsmedia.comಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ……… ಇದು ನಿಜವೇ, ಆರೋಪ ಮಾತ್ರವೇ,ಎಲ್ಲೋ ಅಪರೂಪದ ಸಣ್ಣ ಘಟನೆಗಳೇ, ವ್ಯವಸ್ಥಿತ ಜಾಲವೇ, ಸಹಜ ಪ್ರೀತಿ ಪ್ರೇಮದ ಪ್ರಕರಣಗಳೇ….. ಮನುಷ್ಯರನ್ನೇ ಧರ್ಮದ ಆಧಾರದ ಮೇಲೆ ಒಡೆದು, ನಮ್ಮದೇ ಶ್ರೇಷ್ಠ ಎಂಬ ಮನೋಭಾವ ಬೆಳೆಸಿ, ಜೊತೆಗೆ ಇತರ ಧರ್ಮಗಳ ವಿರುದ್ಧ ದ್ವೇಷ ಭಾವನೆ ಮೂಡಿಸಿ ಅದರ ನಾಶಕ್ಕೆ ಪ್ರಯತ್ನಿಸುತ್ತಾ ಇರುವ ಧಾರ್ಮಿಕ ಮುಖಂಡರುಗಳು ಹೆಚ್ಚಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಖಚಿತವಾಗಿ ಏನನ್ನಾದರೂ ಹೇಳುವುದು ಕಷ್ಟ. ಭಾರತದಲ್ಲಿ ರಾಜಕೀಯ ಕಾರಣದಿಂದಾಗಿ ಸತ್ಯ ಮತ್ತು ಸುಳ್ಳುಗಳ ನಡುವಿನ ಅಂತರ ತುಂಬಾ ಕಡಿಮೆಯಾಗಿದೆ. ಲವ್ ಜಿಹಾದ್ ಎಂಬುದು ನನಗೆ ಅರ್ಥವಾಗಿರುವುದೇನೆಂದರೆ ,ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಸಿ ಅಥವಾ ಪ್ರೀತಿಯ ನಾಟಕವಾಡಿ ಅವರನ್ನು ಮದುವೆಯಾಗಿ, ಅವರನ್ನು ಮತ್ತು ಅವರ ಮಕ್ಕಳನ್ನು ಇಸ್ಲಾಮೀಕರಣ ಮಾಡಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ…

ಮುಂದೆ ಓದಿ..