ಸುದ್ದಿ 

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ವಿಚಾರಣೆ ನವೆಂಬರ್‌ 10ಕ್ಕೆ ಮುಂದೂಡಿಕೆ

Taluknewsmedia.com

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ವಿಚಾರಣೆ ನವೆಂಬರ್‌ 10ಕ್ಕೆ ಮುಂದೂಡಿಕೆ

ಬೆಂಗಳೂರು, ನ.3: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಆರೋಪಿಗಳ ವಿಚಾರಣೆಯನ್ನು ಬೆಂಗಳೂರಿನ 57ನೇ ಸೆಷನ್ ಕೋರ್ಟ್ ನವೆಂಬರ್‌ 10ಕ್ಕೆ ಮುಂದೂಡಿದೆ.

ಜಾಮೀನು ರದ್ದುಪಟ್ಟು ಮತ್ತೆ ಜೈಲಿನಲ್ಲಿರುವ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳು ನವೆಂಬರ್‌ 3ರಂದು ಭಾರೀ ಭದ್ರತೆಯ ಮಧ್ಯೆ ಖುದ್ದು ಕೋರ್ಟ್‌ಗೆ ಹಾಜರಾದರು. ಈ ಸಂಬಂಧ ಕೋರ್ಟ್ ಖುದ್ದು ಹಾಜರಾತಿ ನೀಡಲು ಸೂಚನೆ ನೀಡಿತ್ತು.

ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯ ವಿರುದ್ಧದ ವಿಚಾರಣೆಯು ಇಂದು ನಡೆಯಬೇಕಿದ್ದರೂ, ಕೋರ್ಟ್ ಮುಂದಿನ ದಿನಾಂಕ ನವೆಂಬರ್‌ 10ಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್ ದರ್ಶನ್‌ಗೆ ನೀಡಿದ್ದ ಜಾಮೀನು ರದ್ದುಪಡಿಸಿದ ನಂತರ, ಅವರು ಆಗಸ್ಟ್‌ 14ರಂದು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೇರಿದ್ದರು. ಆ ನಂತರದಿಂದ ಕೋರ್ಟ್ ವಿಚಾರಣೆಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತಿದ್ದರು.

ಈ ಬಾರಿ ಕೋರ್ಟ್‌ನ ಸೂಚನೆಯಂತೆ, 79 ದಿನಗಳ ಬಳಿಕ ದರ್ಶನ್ ಖುದ್ದಾಗಿ ಹಾಜರಾಗಿದ್ದು, ನ್ಯಾಯಾಂಗ ವಲಯದಲ್ಲಿ ಪ್ರಕರಣಕ್ಕೆ ಮತ್ತೊಮ್ಮೆ ಚರ್ಚೆ ಹುಟ್ಟಿಸಿದೆ.

Related posts