ಸುದ್ದಿ 

ಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ?

Taluknewsmedia.com

ಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾಂಸ ಮಾರಾಟದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮದ ಗಂಭೀರ ಚಿತ್ರ ಮತ್ತೊಮ್ಮೆ ಹೊರಬಿದ್ದಿದೆ. ಸ್ಟೆರಾಯ್ಡ್ ತುಂಬಿದ ಕೋಳಿ ಮಾಂಸ ಮಾರಾಟವಾಗುತ್ತಿರುವುದು ಒಂದೆಡೆ ಇದ್ದರೆ, ಮತ್ತೊಂದೆಡೆ ಅವಧಿ ಮೀರಿದ, ಕೆಟ್ಟ ವಾಸನೆ ಬರುವ ಹಾಳಾದ ಕೋಳಿಯನ್ನು ಬಣ್ಣ ಬಳಿದು ತಾಜಾ ಎಂದು ಗ್ರಾಹಕರಿಗೆ ಮಾರಾಟ ಮಾಡುವ ಕಳಂಕಿತ ಕಾರ್ಯ ಬೆಳಕಿಗೆ ಬಂದಿದೆ. ನಗರದ ಕುರುಬರಹಳ್ಳಿ ಪ್ರದೇಶದಲ್ಲಿರುವ “MY Chicken & More” ಅಂಗಡಿ ಇದೀಗ ಈ ಆರೋಪದ ಕೇಂದ್ರವಾಗಿದೆ.

ಮೀಲುವೆಂಬ ಗ್ರಾಹಕರು ಆ ಅಂಗಡಿಯಿಂದ ಚಿಕನ್ ಖರೀದಿಸಿದ ಬಳಿಕ ಮನೆಗೆ ಬಂದು ನೋಡುತ್ತಿದ್ದಂತೆಯೇ ಮಾಂಸ ಸಂಪೂರ್ಣವಾಗಿ ಹಾಳಾಗಿದ್ದು, ದುರ್ವಾಸನೆ ಹೊಳೆಯುತ್ತಿರೋದನ್ನು ಗಮನಿಸಿದ್ದರು. ತಕ್ಷಣವೇ ಅವರು ಮಾಂಸವನ್ನು ಹಿಡಿದು ಅಂಗಡಿಗೆ ಹಿಂತಿರುಗಿದಾಗ, ಅಂಗಡಿ ಮಾಲೀಕರು ಕ್ಷಮೆ ಕೇಳುವ ಬದಲು ಗ್ರಾಹಕರಿಗೇ ಕಿಡಿಕಾರಿದ್ದು, ಜಗಳವಾಡಿ ಬೆದರಿಕೆಯ ಮಾತುಗಳಿಗೂ ಇಳಿದಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಗ್ರಾಹಕರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಆದರೆ, ಇಷ್ಟು ಗಂಭೀರವಾದ ವಿಷಯದ ನಡುವೆ ಕೂಡ, ಪೊಲೀಸರು ಪ್ರಕರಣಕ್ಕೆ FIR ದಾಖಲಿಸದೆ ಕೇವಲ NCR ನೋಂದಾಯಿಸಿರುವುದು ಪ್ರಶ್ನೆಗಳಿಗೆ ಕಾರಣವಾಗಿದೆ. ಜನರ ಆರೋಗ್ಯದ ಮೇಲೆ ಮಿಡಿಯುವಂತ ಕಾರ್ಯ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮವೇ ಸರಿ. NCR ಅಲ್ಲ, ನೇರ FIR ಆಗಿ ಕಾನೂನು ಕ್ರಮ ಜರುಗಬೇಕು.

ಫುಡ್ ಸೇಫ್ಟಿ ಅಧಿಕಾರಿಗಳು ಕೂಡಾ ತಡವಿಲ್ಲದೆ ‘MY Chicken & More’ ಅಂಗಡಿಯನ್ನು ಸೀಲ್ಮಾಡಿ ಪರಿಶೀಲನೆ ಕೈಗೊಳ್ಳಬೇಕು. ನಗರದ ಇತರೆ ಚಿಕನ್ ಅಂಗಡಿಗಳಲ್ಲೂ ದಿಢೀರ್ ದಾಳಿ ಮಾಡಿ, ಮಾಂಸ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವುದು ಅಗತ್ಯ. ಇದರ ಜೊತೆಗೆ, ಅನೇಕ ಚಿಕನ್ ಶಾಪ್‌ಗಳಲ್ಲಿ ತೂಕದ ಯಂತ್ರದಲ್ಲೂ ಆಟ ಆಡಲಾಗುತ್ತಿದೆ. 1 ಕೆಜಿ ಮಾಂಸಕ್ಕೆ ಒಂದೂವರೆ ಕೆಜಿ ತೂಕ ತೋರಿಸುವ ಮೂಲಕ ಗ್ರಾಹಕರನ್ನು ಕಣ್ಣೆದುರಿನಲ್ಲೇ ಮೋಸ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಸಾರ್ವಜನಿಕರ ಆರೋಗ್ಯ, ಹಣ ಮತ್ತು ನಂಬಿಕೆಯನ್ನು ಕಾಪಾಡುವುದು ಆಡಳಿತ ಹಾಗೂ ತನಿಖಾ ಅಧಿಕಾರಿಗಳ ಕರ್ತವ್ಯ.

ಈ ಘಟನೆ ತನಿಖೆಗೆ ಒಳಪಟ್ಟು, ತಪ್ಪಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

Related posts