ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್: ಪಿರಿಯಾಪಟ್ಟಣ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುವ ವೇಳೆ ಬಂಧನ
ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್: ಪಿರಿಯಾಪಟ್ಟಣ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುವ ವೇಳೆ ಬಂಧನ
ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಕಂದಾಯ ಇಲಾಖೆಯ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪೋಡಿ ದುರಸ್ತಿ ಹಾಗೂ ದಾಖಲೆ ತಿದ್ದುಪಡಿ ಮಾಡಿಕೊಡುವ ಹೆಸರಿನಲ್ಲಿ ಅವರು ಲಂಚ ಕೇಳುತ್ತಿದ್ದರೆಂಬ ಮಾಹಿತಿ ಹಿನ್ನೆಲೆ ಕಾರ್ಯಾಚರಣೆ ನಡೆದಿದೆ.
ಜಮೀನಿನ ಮಾರ್ಗ ರಸ್ತೆಯತ್ತ ಹೋಗುತ್ತದೆ ಎಂದು ಭೀತಿಗೊಳಿಸಿ, ಕೆಲಸ ಮಾಡಿಕೊಡುವುದಾಗಿ ಹೇಳಿ ಒಟ್ಟು 1 ಲಕ್ಷ ರೂ. ಲಂಚ ಕೇಳಿದ್ದ ಸರ್ವೇಯರ್, 30 ಸಾವಿರ ರೂ. ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ತಂಡ ಕೈಕಡವಿ ಹಿಡಿದಿದೆ.
ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ವಿಜಯಕುಮಾರ್ ಅವರ ನೇತೃತ್ವದ ತಂಡ ಹುಣಸೂರಿನ ಬಾರ್ನಲ್ಲಿ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆಯನ್ನು ನಡೆಸಿತು. ಹಣ ಸ್ವೀಕರಿಸುವ ಕ್ಷಣದಲ್ಲೇ ಸರ್ವೇಯರ್ ರವೀಂದ್ರನನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ಲಂಚದ ಬೇಡಿಕೆ ಮತ್ತು ಸ್ವೀಕಾರ ಸಂಬಂಧಿಸಿ ಮುಂದಿನ ಕಾನೂನು ಕ್ರಮ ಪ್ರಾರಂಭಿಸಲಾಗಿದೆ.

