ರಾಜಕೀಯ ಸುದ್ದಿ 

ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ

Taluknewsmedia.com

ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ ಸತಿ ಅನಸೂಯ ದೇವಿಯವರ ಪೂಜೆ ಹಾಗೂ ಸಂಕೀರ್ತನ ಯಾತ್ರೆ ಆರಂಭವಾಗುತ್ತಿದೆ. ಈ ಸಂಕೀರ್ತನಾ ಯಾತ್ರೆಗೆ ಮುನ್ನ ಧಾರ್ಮಿಕ ಜಾಗೃತಿ ಸಭೆಯನ್ನು ಉದ್ದೇಶಿಸಿ, ಖ್ಯಾತ ವೈದ್ಯೆಯಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಾತನಾಡಲಿದ್ದಾರೆ.

ನಮ್ಮ ಬೇಡಿಕೆಗಳು ಹಳೆಯದೇ. “ದತ್ತಪೀಠ ಬೇರೆ, ಬಾಬಾ ಬುಡನ್ ದರ್ಗಾ ಬೇರೆ” ಎನ್ನುವುದನ್ನು ಕಂದಾಯ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಈ ದಾಖಲೆಗಳ ಹಿನ್ನಲೆಯಲ್ಲಿ ಹಿಂದೂಗಳಿಗೆ ನ್ಯಾಯ ದೊರಕಬೇಕು. ಈಗ ಅರ್ಧ ನ್ಯಾಯ ಸಿಕ್ಕಿದೆ; ಪೂರ್ಣ ನ್ಯಾಯ ಸಿಗಬೇಕು. ಆ ಪೂರ್ಣ ನ್ಯಾಯ ಸಿಗುವವರೆಗೂ ಭಕ್ತಿ ಹಾಗೂ ಶಕ್ತಿಯ ಈ ಆಂದೋಲನವನ್ನು ಮುಂದುವರಿಸುವುದು ಅನಿವಾರ್ಯ. ದತ್ತಾತ್ರೇಯರೂ, ಸತಿ ಅನಸೂಯ ದೇವಿಯೂ ಕೂಡ ನಮ್ಮ ಈ ಆಶಯವನ್ನು ಆಶೀರ್ವದಿಸುತ್ತಿದ್ದಾರೆ. ಅವರ ಭಕ್ತರೂ ಪೂರ್ಣ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಾರೆ.

ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವ ಅವಕಾಶ ಕೂಡ ದೊರಕಬೇಕು. ಪೂಜೆಗೆ ಅವಕಾಶ ಕೊಡಬೇಕು. ಮೂರು ದಿನ ಹಿಂದಿನಿಂದೇ ಬೇಡಿಕೆ ಇತ್ತು, ಆದರೆ ಕೇವಲ ಒಂದು ದಿನ ಮಾತ್ರ ಅವಕಾಶ ನೀಡಲಾಗಿದೆ. ದತ್ತಾತ್ರೇಯ ಕ್ಷೇತ್ರಗಳಲ್ಲಿ ಜಾತೀಯತೆಗೂ, ಅಸ್ಪೃಶ್ಯತೆಗೊ ಜಾಗ ಇಲ್ಲ. ಇಲ್ಲಿ ಪ್ರಕೃತಿಯೊಂದಿಗಿನ ಐಕ್ಯತೆಯ ಸಂಪ್ರದಾಯ ಬಹಳ ಹಿಂದಿನಿಂದ ಬೆಳೆದಿದೆ. ಅದರ ಅಂಗವಾಗಿಯೇ ಔದುಂಬರ ವೃಕ್ಷ ಪ್ರದಕ್ಷಿಣೆ ನಡೆಯುತ್ತದೆ. ದತ್ತಾತ್ರೇಯರಿಗೆ ಅತ್ಯಂತ ಪ್ರಿಯವಾದ ವೃಕ್ಷವೇ ಈ ಔದುಂಬರ ವೃಕ್ಷ.

ಹೋಮ–ಹವನಾದಿಗಳೂ ಕೂಡ ಪ್ರಕೃತಿಪೂಜೆಯ ಭಾಗ. ನಾವು ಗಂಗೆಯನ್ನು, ಅಗ್ನಿಯನ್ನು, ವಾಯುವನ್ನು, ಭೂಮಿಯನ್ನು, ಆಕಾಶವನ್ನು ಪೂಜಿಸುತ್ತೇವೆ. ಪ್ರತಿಯೊಂದು ಅಂಶದಲ್ಲೂ, ಮಣ್ಣಿನ ಕಣದಲ್ಲೂ, ಅಣುರೇಣುಗಳಲ್ಲಿ, ತೃಣಕಾಶಿಗಳಲ್ಲೂ ಮಹಾದೇವನನ್ನು ಕಾಣುವುದು — ಇದುವೇ ಸನಾತನ ಧರ್ಮದ ವಿಶಿಷ್ಟತೆ. ಈ ಪೂಜಾ ಪರಂಪರೆ ಅದರ ಅಂಗ.

ಆ ಕಾರಣಕ್ಕೆ ನಾನು ಆಗ್ರಹಿಸುತ್ತೇನೆ:
ನಮಗೆ ನ್ಯಾಯ ಕೊಡಿ.
ನಮಗೆ ಬಾಬಾ ಬಡನ್ ದರ್ಗಾ ಬೇಡ. ದತ್ತಪೀಠವೇ ಬೇಕು.

ಕಂದಾಯ ಮತ್ತು ಸಂವಿಧಾನದ ದಾಖಲೆಗಳ ಪ್ರಕಾರ, ದರ್ಗಾ ನಾಗೇನಹಳ್ಳಿ ಸರ್ವೇ ಸಂಖ್ಯೆ 57ರಲ್ಲಿ ಇದೆ. ಇದನ್ನು ಶಾಖಾದ್ರಿಗೂ ತಿಳಿದಿದೆ. ಆದರೆ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಶಾಖಾದ್ರಿಯ ಪೂರ್ವಿಕರು ಅತಿಕ್ರಮಣ ಮಾಡಿದ್ದರು. ಈ ಅನ್ಯಾಯ ಸರಿಯಾಗಬೇಕು.

ಶಾಖಾದ್ರಿ ಅವರೇ, ವಿತಂಡವಾದಕ್ಕೆ ಜಾಗ ಬಿಡಬೇಡಿ. ನಿಮಗೆ ಗೊತ್ತಿರುವ ಮಾತು:
ಬಾಬಾ ಬಡನ್ ದರ್ಗಾ → ನಾಗೇನಹಳ್ಳಿ, ಸರ್ವೇ ನಂ. 57
ದತ್ತಪೀಠ → ಇನಾಂ ದತ್ತಾತ್ರೇಯ ಪೀಠ ಗ್ರಾಮ, ಸರ್ವೇ ನಂ. 195

ಹಾಗಿರುವಾಗ ದಾದಾ ಹಯತ್ ಮೀರ್ ಕಲಂದರ್‌ಗೂ, ಬಾಬಾ ಬುಡನ್‌ಗೂ ದತ್ತಪೀಠಕ್ಕೂ ಏನು ಸಂಬಂಧ? ಯಾವುದರ ದೃಷ್ಟಿಯಿಂದ ನೋಡಿದರೂ ಸಂಬಂಧವಿಲ್ಲ. ದತ್ತಪೀಠಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ‘ಬಾಬಾ ಬುಡನ್’ ಎಂಬ ಪರಂಪರೆ ಕೇವಲ ಎರಡು–ನೂರು ವರ್ಷಗಳಷ್ಟೇ.

ಈ ನೆಲದ ಸಂಸ್ಕೃತಿಯಾಧಾರದ ಮೇಲೂ ನೋಡಿದರೆ, ದತ್ತಾತ್ರೇಯರ ಆರಾಧನೆ ಅತ್ಯಂತ ಪುರಾತನ ಸಂಪ್ರದಾಯ. ಅನ್ಯಾಯ ಮತ್ತು ಅಧರ್ಮದ ಮೂಲಕ ಈ ಪೀಠವನ್ನು ವಶಪಡಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ.

ಹೀಗಾಗಿ ನಾವು ಸಂಧಾನದ ಮಾರ್ಗದಲ್ಲೇ ಬೇಡಿಕೆ ಇಟ್ಟಿದ್ದೇವೆ – ನಿಮ್ಮದು ನಿಮಗೆ, ನಮ್ಮದು ನಮಗೆ.
ನಿಮ್ಮ ದರ್ಗಾದಲ್ಲಿ ನೀವು ಪೂಜೆ–ಉರಸು ಮಾಡಿಕೊಳ್ಳಿ.
ನಮ್ಮ ದತ್ತಪೀಠದಲ್ಲಿ ಅತಿಕ್ರಮಣಗೊಂಡಿರುವ ಗೋರಿಯನ್ನು ತೆರವುಗೊಳಿಸಿ.

ಇದನ್ನೇ ಅವರಿಗೆ ತಿಳಿಸಲು ನಾನು ಬಯಸುತ್ತೇನೆ.

Related posts