7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ : SP ಬಿಚ್ಚಿಟ್ಟ ಶಾಕಿಂಗ್ ಸ್ಟೋರಿ…
7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ : SP ಬಿಚ್ಚಿಟ್ಟ ಶಾಕಿಂಗ್ ಸ್ಟೋರಿ
ನೆನ್ನೆ ದಿನ ಮುರುಗೋಟ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ನೊಂದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆ ದೂರು ಪ್ರಕಾರ, ಒಬ್ಬ ವ್ಯಕ್ತಿ ಅವಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಜೊತೆಗೆ ಮತ್ತೊಬ್ಬ ವ್ಯಕ್ತಿ ಆರೋಪಿಗೆ ಸಹಾಯ ಮಾಡಿದ ಆರೋಪವೂ ದಾಖಲಾಗಿದೆ.
ದೂರು ಬಂದ ತಕ್ಷಣ ಇಬ್ಬರು ಆರೋಪಿಗಳನ್ನೂ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನೊಂದ ಬಾಲಕಿಯ ವಿಚಾರಣೆಗಾಗಿ ಮಹಿಳಾ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲಾಗಿದ್ದು, ಅವರ ಎದುರು ಬಾಲಕಿ ತನ್ನ ಹೇಳಿಕೆ ನೀಡಿದ್ದಾಳೆ. ಆರೋಪಿಗಳಾದ ಮಣಿಕಂಠ ಮತ್ತು ಈರಣ್ಣ ಈಗಾಗಲೇ ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ತಡವಾದ ದೂರು ಕುರಿತು SP ಹೇಳಿಕೆ:..
ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಬಾಲಕಿಯರು ಶಾಕ್ಗೆ ಒಳಗಾಗುವ ಕಾರಣ ಮೊದಲಿಗೆ ವಿಷಯವನ್ನು ಹೇಳುವುದಿಲ್ಲ. ಹೇಳಿದ ಮೇಲೂ, “ಮಾನ–ಮರ್ಯಾದೆ” ಕಾಪಾಡಿಕೊಳ್ಳಬೇಕೆಂಬ ಭೀತಿಯಿಂದ ಕೆಲ ಪೋಷಕರು ಪೊಲೀಸರ ಬಳಿ ದೂರು ತರಲು ಹಿಂದೇಟು ಹಾಕುತ್ತಾರೆ. ಈ ಪ್ರಕರಣದಲ್ಲೂ ಅವರ ತಡವಾಗಿ ದೂರು ನೀಡಿರುವುದು ಅಪ್ರಸ್ತುತ; ಮೊದಲಿಗೆ ಘಟನೆ ನಡೆದಿದೆಯೇ ಇಲ್ಲವೇ ಎಂಬುದನ್ನು ತನಿಖೆಯಲ್ಲಿ ದೃಢಪಡಿಸಬೇಕು. ಮೇಲ್ನೋಟಕ್ಕೆ ಘಟನೆ ನಡೆದಿರುವುದು ಗೋಚರಿಸಿದೆ.
ಬಾಲಕಿಯ ಕುಟುಂಬಕ್ಕೆ ರಕ್ಷಣೆ:..
ಆರೋಪಿಗಳನ್ನು ಬಂಧಿಸಿದ ನಂತರ ಕುಟುಂಬಕ್ಕೆ ಯಾವುದೇ ತಕ್ಷಣದ ಬೆದರಿಕೆ ಇದ್ದರೆ, ಪೊಲೀಸರು ಖಚಿತವಾಗಿ ರಕ್ಷಣೆ ನೀಡುತ್ತಾರೆ ಎಂದು SP ತಿಳಿಸಿದ್ದಾರೆ.
‘ಪೊಲೀಸರು ರಾಜಿ ಮಾಡಿಸಿದರು’ ಎಂಬ ಆರೋಪಕ್ಕೆ ಸ್ಪಷ್ಟನೆ:..
ಪೊಲೀಸರು ರಾಜಿ ಮಾಡಿಸುವ ಯಾವ ಅವಶ್ಯಕತೆಯೂ ಇಲ್ಲ. ವಿಶೇಷವಾಗಿ POCSO ಪ್ರಕರಣಗಳಲ್ಲಿ ಯಾವ ರೀತಿಯ ರಾಜಿಗೂ ಅವಕಾಶವಿಲ್ಲ, ಅದು ಪೊಲೀಸರ ಕೆಲಸವೂ ಅಲ್ಲ. “ಪೊಲೀಸರು ರಾಜಿ ಮಾಡಿಸಲು ಯತ್ನಿಸಿದ್ದಾರೆ” ಎಂಬ ಮಾತು ಸಂಪೂರ್ಣ ಸುಳ್ಳು. SP ಅವರು, “ನಾವು ಏನು ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಹೆಚ್ಚು ವಿವರವಾಗಿ ಹೇಳಲು ಆಗುವುದಿಲ್ಲ, ಹೇಳಿದರೆ ತನಿಖೆಗೆ ತೊಂದರೆ ಉಂಟಾಗಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.

