ಸುದ್ದಿ 

ಚಿಕ್ಕಬಳ್ಳಾಪುರ: ಭೋಗನಂದೀಶ್ವರ ದೇವಾಲಯದ ಹುಂಡಿಯಲ್ಲಿ ವಿಚಿತ್ರ ಪತ್ರಗಳ ಪತ್ತೆ

Taluknewsmedia.com

ಚಿಕ್ಕಬಳ್ಳಾಪುರ: ಭೋಗನಂದೀಶ್ವರ ದೇವಾಲಯದ ಹುಂಡಿಯಲ್ಲಿ ವಿಚಿತ್ರ ಪತ್ರಗಳ ಪತ್ತೆ

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆಯ ವೇಳೆ ಅಚ್ಚರಿ ಮೂಡಿಸುವ ಬೇಡಿಕೆಗಳಿರುವ ಹಲವು ಪ್ರೇಮ ಪತ್ರಗಳು ಮತ್ತು ಫೋಟೋಗಳು ಪತ್ತೆಯಾಗಿವೆ.

ಹುಂಡಿಯಲ್ಲಿದ್ದ ಗರಿ-ಗರಿ ನೋಟುಗಳ ಜೊತೆ ಕೆಲವರು ಹಾಕಿದ್ದ ಮಹಿಳೆಯರ ಫೋಟೋಗಳು ಹಾಗೂ ಅದಕ್ಕೆ ಹಿಂಭಾಗದಲ್ಲಿದ್ದ ಮನವಿ ಪತ್ರಗಳು ದೇವಸ್ಥಾನದ ಸಿಬ್ಬಂದಿಯನ್ನು ಬೆಚ್ಚಿಬೀಳುವಂತೆ ಮಾಡಿವೆ.

ಫೋಟೋವೊಂದರ ಹಿಂದಿನ ಬರಹ ಹೀಗಿತ್ತು:
“ಪದ್ಮಾ, ಮತ್ತೆ ನನ್ನ ಜೀವನಕ್ಕೆ ಬಾ…” ಎಂಬ ಪ್ರೇಮ ಮನವಿ.
ಮತ್ತೊಂದು ಚೀಟಿಯಲ್ಲಿ ಯುವಕ ಹೀಗೆ ಬರೆದಿದ್ದಾನೆ:
“ನಾನು ಪ್ರೀತಿಸುವ ಹುಡುಗಿಯ ತಂದೆ ತಾಯಿಗೆ ಒಳ್ಳೆಯ ಬುದ್ದಿ ನೀಡಿ, ನಮ್ಮ ಪ್ರೀತಿಗೆ ಮುಕ್ತ ಹೃದಯದಿಂದ ಒಪ್ಪುವಂತೆ ಮಾಡಿ ಭಗವಂತ.”

ಇಷ್ಟಕ್ಕೆ ಮಾತ್ರ ಸೀಮಿತವಾಗದೆ, ಕೆಲವರು ತಮ್ಮ ಕುಟುಂಬದ ಸಮಸ್ಯೆಗಳನ್ನು ಬರೆದಿರುವುದು ಕಂಡುಬಂದಿದೆ.
“ಗಂಡನಿಗೆ ಒಳ್ಳೆಯ ಉದ್ಯೋಗ ಸಿಗಲಿ”, “ನನ್ನ ಮಗ ಓದಿನಲ್ಲಿ ಮುಂದೆ ಬೆಳಗಲಿ, ಇಂಜಿನಿಯರ್ ಆಗಲಿ” ಎಂಬಂತಹ ಬೇಡಿಕೆಗಳೂ ಹುಂಡಿಯಲ್ಲಿ ಕಂಡುಬಂದಿವೆ.

ದೇವರ ದರ್ಶನಕ್ಕೆ ಬರುವ ಭಕ್ತರು ತಮ್ಮ ಮನದಾಳದ ಆಶೆಗಳನ್ನೂ ನೋವು–ಬೇಡಿಕೆಗಳನ್ನೂ ದೇವರ ಕಾಲಿಗೆ ಒಪ್ಪಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಈ ಬಾರಿ ಪತ್ತೆಯಾದ ಪ್ರೇಮ ಸಂಬಂಧಿತ ಚೀಟಿಗಳು ಮತ್ತು ಫೋಟೋಗಳು ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರಲ್ಲಿ ಕುತೂಹಲವನ್ನು ಹುಟ್ಟುಹಾಕಿವೆ.

Related posts