ಸುದ್ದಿ 

ಡಿನ್ನರ್ ಪಾರ್ಟಿ, ಬ್ರೇಕ್‌ಫಾಸ್ಟ್–ಲಂಚ್ ರಾಜಕೀಯ ಮತ್ತು ‘ಬ್ರದರ್ಸ್’ ಹೇಳಿಕೆಯ ಬಗ್ಗೆ P. ರಾಜೀವ್ ಅವರ ವಿಮರ್ಶೆ

Taluknewsmedia.com

ಡಿನ್ನರ್ ಪಾರ್ಟಿ, ಬ್ರೇಕ್‌ಫಾಸ್ಟ್–ಲಂಚ್ ರಾಜಕೀಯ ಮತ್ತು ‘ಬ್ರದರ್ಸ್’ ಹೇಳಿಕೆಯ ಬಗ್ಗೆ P. ರಾಜೀವ್ ಅವರ ವಿಮರ್ಶೆ

ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯುತ್ತಿರುವ ಡಿನ್ನರ್–ಬ್ರೇಕ್‌ಫಾಸ್ಟ್ ರಾಜಕೀಯ ನೋಡಲು ಈ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸೀಟುಗಳನ್ನು ನೀಡಿಲ್ಲ. ಜನರು ಮತ ಹಾಕಿದ್ದು ಜನರ ಸಮಸ್ಯೆಗಳ ಪರಿಹಾರಕ್ಕಾಗಿ; ಪಕ್ಷದ ಒಳಗಿನ ನಾಟಕ ಕಂಪನಿ ನೋಡಲು ಅಲ್ಲ. ರಾಜ್ಯದ ದಲಿತರು, ಯುವಕರು ಇಂದು ಹಲವು ಸಮಸ್ಯೆಗಳಿಂದ ಬೀದಿಗಿಳಿದಿದ್ದಾರೆ. ಈ ಸಂದರ್ಭದಲ್ಲಿ ಯಾರ ಮನೆಯಲ್ಲಿ ಬ್ರೇಕ್‌ಫಾಸ್ಟ್ ಮಾಡ್ತೀರಿ, ಯಾರ ಮನೆಯಲ್ಲಿ ಲಂಚ್ ಮಾಡ್ತೀರಿ ಎಂಬುದು ಮುಖ್ಯವಲ್ಲ.

ಇನ್ನು ‘ಎಲ್ಲಿ ಕೋಳಿ ತರ್ತೀರಿ’, ‘ಕೋಳಿಯ ಬಣ್ಣ ಯಾವುದು’, ‘ಜುಟ್ಟು ಎಷ್ಟು’, ‘ಕೊಂಬು ಎಷ್ಟು ದೊಡ್ಡದು’, ‘ಯಾವ ಬಣ್ಣದ ಕೋಳಿಗಳು ಇದ್ದವು’, ‘ಅಕ್ಕೆ ಏನು ತಿನ್ನಿಸಿದ್ರು’, ‘ಯಾರು ತಿಂದ್ರು’—ಈসব ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಈ ರಾಜ್ಯದ ಜನರು ಕುಳಿತಿಲ್ಲ. ಜನರ ಆದೇಶ ಸ್ಪಷ್ಟ: ನಿಮ್ಮ ಕುರ್ಚಿ–ಕಾಳಗವನ್ನು ಬದಿಗಿಟ್ಟು ಜನರ ಸಮಸ್ಯೆಗಳ ಕಡೆ ಮುಖ ಮಾಡಿ.

ರೈತರನ್ನೇ ನೋಡಿ—ಈ ಸರ್ಕಾರಕ್ಕೆ ರೈತರು ಕಾಣುತ್ತಿಲ್ಲವೇ? ದಲಿತರಿಗಾಗಿ ಒಂದೇ ಒಂದು ಮನೆಯನ್ನು ಸಹ ಮಂಜೂರು ಮಾಡಲು ಈ ಸರ್ಕಾರದ ಯೋಗ್ಯತೆ ಸಾಲಿಲ್ಲ. ಒಂದು ಗ್ರಾಮ ಪಂಚಾಯತಿಗೂ ಸರಿಯಾಗಿ ಮನೆ ಮಂಜೂರಾಗಿಲ್ಲ ಎಂಬುದು ವಿಷಾದನೀಯ.

ಇನ್ನು ಆಡಳಿತ ವ್ಯವಸ್ಥೆಯೂ ಸಂಪೂರ್ಣವಾಗಿ ‘ಸ್ಟ್ಯಾಂಡ್‌ಸ್ಟಿಲ್’. ವಿಧಾನಸೌಧದಲ್ಲಿ ಕಾರ್ಯದರ್ಶಿಗಳ ಫೈಲುಗಳು ಮುಂದೆ ಸಾಗುವುದೇ ಇಲ್ಲ. ಇದರ ನೇರ ಪರಿಣಾಮ ಮತದಾರರ ಮೇಲೂ, ಸಾಮಾನ್ಯ ಜನರ ಮೇಲೂ ಬೀಳುತ್ತಿದೆ.

‘ಬ್ರದರ್ಸ್’ ಎಂದವರು ಯಾರು? ಯಾರನ್ನು ‘ಬ್ರದರ್ಸ್’ ಅಂತಾರೆ? ಅವರನ್ನು ಯಾವಾಗ ಕೈಬಿಟ್ಟಿದ್ದರು?—ಈ ಎಲ್ಲಕ್ಕೂ ದೊಡ್ಡ ಇತಿಹಾಸವಿದೆ. D.K. ಶಿವಕುಮಾರ್ ಇಂದು ‘ಬ್ರದರ್ಸ್’ ಅಂತಾ ಹೇಳುತ್ತಿದ್ದರೂ, ಹಿಂದೆ ಏನು ನಡೆದಿದೆ ಎಂಬುದು ಎಲ್ಲರಿಗೂ ಗೊತ್ತು.

ಕಾಂಗ್ರೆಸ್ ಹೈಕಮಾಂಡ್‌ಗೂ ಇಲ್ಲಿ ಜವಾಬ್ದಾರಿ ಇದೆ. ಜನರು ಮತ ಹಾಕಿದ್ದರಿಂದ, ಯಾರನ್ನು ಮುಖ್ಯಮಂತ್ರಿಯಾಗಿ ಉಳಿಸಬೇಕು, ಯಾರನ್ನು ಬದಲಿಸಬೇಕು ಎಂಬುದನ್ನು ಹೈಕಮಾಂಡ್ ನೇರವಾಗಿ ಮತದಾರರಿಗೆ ಹೇಳಬೇಕು. ‘ನಾವು ಮನಸ್ಸಿಗೆ ಬಂದಂತೆ ಕುಣಿತೀವಿ’ ಎನ್ನುವ ರೀತಿಯಲ್ಲಿ ಆಡಳಿತ ನಡೆಸಲು ಜನರು ಮತ ಹಾಕಿಲ್ಲ.

Related posts