“ಅಂಜನಾದ್ರಿಯಲ್ಲಿ ನಾಳೆ ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಸಿದ್ಧತೆಗಳನ್ನು ನೀವು ಈಗಾಗಲೇ
ಜನಾರ್ಧನ ರೆಡ್ಡಿ ಮಾತನಾಡುತ್ತಾ ಹೇಳಿದರು:..
“ಅಂಜನಾದ್ರಿಯಲ್ಲಿ ನಾಳೆ ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಸಿದ್ಧತೆಗಳನ್ನು ನೀವು ಈಗಾಗಲೇ ಮಾಧ್ಯಮಗಳ ಮೂಲಕ ಚೆನ್ನಾಗಿ ಪ್ರಚಾರ ಮಾಡಿದ್ದೀರಿ. ಇದರ ಪರಿಣಾಮವಾಗಿ ಇಲ್ಲಿ ಬರಲಿರುವ ಭಕ್ತರಿಗೆ ವಿಶೇಷ ಸಂತೋಷದ ವಾತಾವರಣ ಸೃಷ್ಟಿಯಾಗಿದೆ. ಮಾಧ್ಯಮಗಳ ಈ ಸಹಕಾರಕ್ಕೆ ಈ ಭಾಗದ ಶಾಸಕರಾಗಿ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.
ಇಲ್ಲಿ ಕೆಳಭಾಗದಲ್ಲಿರುವ ಬಾಲ ಹನುಮಂತರಿಗೆ ಅದ್ಭುತ ಹೂವಿನ ಅಲಂಕಾರ ಮಾಡಲಾಗಿದೆ. ಮೇಲಿನ ದೇವಾಲಯದಲ್ಲೂ ಹನುಮಂತನಿಗೆ ಸುಂದರ ಹೂವಿನ ಅಲಂಕಾರ ಸಿದ್ಧವಾಗಿದೆ. ಸುಮಾರು 1–2 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಾಮನಾಮ ಸ್ಮರಣೆಯ ಧ್ವನಿಮುದ್ರಿಕೆ ಪ್ರಸಾರವಾಗುತ್ತಿದೆ.
ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಹನುಮನಹಳ್ಳಿಯಿಂದ ಪಂಪ ಸರ್ವರ ಮಾರ್ಗದವರೆಗೆ ಸುಮಾರು 6 ಕೋಟಿ ವೆಚ್ಚದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಸ್ತುತ ರಫ್ರೋಡ್ ಸಿದ್ಧವಾಗಿದೆ. ಆರೋಗ್ಯ ವಿಭಾಗದವರು ಕೆಳಭಾಗ, ಮಧ್ಯಭಾಗ ಹಾಗೂ ವೇದಪಾಠಶಾಲೆ ಹತ್ತಿರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹೆಲ್ತ್ ಕ್ಯಾಂಪ್ಗಳನ್ನು ಮಾಡಿದ್ದು, ಅಗತ್ಯ ಸೌಲಭ್ಯಗಳನ್ನು ಮಾಡಿದ್ದಾರೆ.
ನಾಳೆ ಬೆಳಿಗ್ಗೆ ಹನುಮಮಾಲಾಧಾರಿಗಳ ಶೋಭಾಯಾತ್ರೆ ನಡೆಯಲಿದ್ದು, ಇಂದು ರಾತ್ರಿ ಅವರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ನಗರದಲ್ಲಿ ಮಾಡಲಾಗಿದೆ. ನಾಳೆಯಿಂದ ಮಧ್ಯರಾತ್ರಿಯವರೆಗೆ ಭಕ್ತರಿಗೆ ಪ್ರಸಾದ ವಿತರಣೆಯೂ ವ್ಯವಸ್ಥೆಯಾಗಲಿದೆ. ಸ್ನಾನಗಟ್ಟಿಗಳು, ಪಾರ್ಕಿಂಗ್, ಲೈಟಿಂಗ್ ಸೇರಿದಂತೆ ಯಾವುದೇ ಅಡಚಣೆ ಇಲ್ಲದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಕಳೆದ ನಾಲ್ಕೈದು ದಿನಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ.
ಈ ಬಾರಿ ಮಾಲಾಧಾರಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುವ ನಿರೀಕ್ಷೆಯಿದೆ. ಕಳೆದ ಬಾರಿ ಸುಮಾರು 70 ಸಾವಿರ ಮಂದಿ ಬಂದಿದ್ದರು. ಈಗ 20–23 ಜಿಲ್ಲೆಗಳಿಂದಲೇ ಲಕ್ಷಾಂತರ ಮಾಲಾಧಾರಿಗಳು ಬರುತ್ತಿದ್ದಾರೆ. ಒಟ್ಟಿನಲ್ಲಿ, ಭಕ್ತರು ಸೇರಿ ಸುಮಾರು ಎರಡು ರಿಂದ ಮೂರು ಲಕ್ಷ ಜನರು ಆಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಜಿಲ್ಲಾಡಳಿತದ ವೆಚ್ಚಗಳ ಬಗ್ಗೆ ಕೆಲವು ವಿಚಾರಗಳು ನನ್ನ ಗಮನಕ್ಕೆ ಬಂದಿದ್ದರೂ, ನಾನು ಈಗ ಮಾಲೆ ಧರಿಸಿರುವ ಕಾರಣ, ಆತ್ಮೀಯ ಆಧ್ಯಾತ್ಮಿಕ ವಾತಾವರಣದಲ್ಲಿ ಅವುಗಳ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ನಾನು ಮಾಲೆ ಮುಗಿದ ನಂತರ, ಡಿಸೆಂಬರ್ 4ರಂದು, ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಸ್ಪಷ್ಟನೆ ನೀಡುತ್ತೇನೆ.
ಹನುಮಂತನ ಅನುಗ್ರಹದಿಂದ ಅಂಜನಾದ್ರಿಗೆ ಯಾವ ಕೊರತೆಯೂ ಇಲ್ಲ. ಭಕ್ತರು ಕೊಡುವ ಉಂಡಿಗಳ ಮೂಲಕವೇ ಪ್ರತಿ ತಿಂಗಳು 65 ಲಕ್ಷರಿಂದ 1.80 ಕೋಟಿ ರೂ.ವರೆಗೆ ಆದಾಯ ಬರುತ್ತಿದೆ. ಈ ಸಮಾರಂಭಕ್ಕೆ ಬೇಕಾದ ಅಲಂಕಾರ, ಶೋಭಾಯಾತ್ರೆ, ಪ್ರಸಾದ, ಭಕ್ತರ ವ್ಯವಸ್ಥೆಗಳು ಮುಜರಾಯಿ ಇಲಾಖೆಯೇ ಮಾಡುತ್ತಿದೆ.”

