ಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR
ಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR
ನಗರದ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಂದ ಗಲಾಟೆ, ಹಲ್ಲೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರತ್ಯೇಕ ಘಟನೆಗಳು ಹೊರಬಿದ್ದಿವೆ. ಈ ಸಂಬಂಧ ಪೊಲೀಸರಿಗೆ ಪ್ರಕರಣಗಳು ದಾಖಲಾಗಿವೆ.
ಮೊದಲ ಪ್ರಕರಣ – ಸಹ ಕೈದಿಗಳ ಮೇಲೆ ಹಲ್ಲೆ
ನವೆಂಬರ್ 29ರಂದು ವಿಚಾರಣಾಧಿಕೀನ ಕೈದಿ ಮುಹಮ್ಮದ್ ಆಸಿಫ್ ಜೈಲಿನ ಅಧೀಕ್ಷಕ ಶರಣಬಸಪ್ಪರ ಕಚೇರಿಯ ಮುಂದೆ ಜೋರಾಗಿ ಗದ್ದಲ ಸೃಷ್ಟಿಸಿ, ‘ಎ’ ವಿಭಾಗದ ಕೈದಿಗಳನ್ನು ಹೊರಗೆ ಬರಲು ಪ್ರಚೋದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದೇ ವೇಳೆ ಅಡುಗೆಮನೆಯಲ್ಲಿ ಕೆಲಸಮಾಡುತ್ತಿದ್ದ ಮೂವರು ಸಹ ಕೈದಿಗಳ ಮೇಲೆ ಆಸಿಫ್ ಹಲ್ಲೆ ನಡೆಸಿದ್ದಾನೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣ – ಐವರ ಗಲಾಟೆ
ಡಿಸೆಂಬರ್ 2ರಂದು ಕೈದಿಗಳಾದ ಮುಹಮ್ಮದ್ ಆಸಿಫ್, ಮೊಯ್ದಿನ್ ಫರಾಝ್, ಇಬ್ರಾಹೀಂ ಖಲೀಲ್, ನಿಸಾರ್ ಹುಸೈನ್ ಮತ್ತು ಮುಹಮ್ಮದ್ ಅಫೀಝ್ ಕರ್ತವ್ಯ ನಿರತ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಹಾಗೂ ಬೆದರಿಕೆ ಹಾಕಿರುವುದು ಆರೋಪವಾಗಿದೆ.
ಕಾರಾಗೃಹದಲ್ಲಿ ಕೈದಿಗಳ ವರ್ತನೆ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ, ಜೈಲು ಆಡಳಿತ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ.

