ಸುದ್ದಿ 

ಸರ್ಕಾರಿ ಜಮೀನು ಕಬಳಿಕೆಯ ದೂರು: ನಕಲಿ ದಾಖಲೆ ಸೃಷ್ಟಿ ಬಗ್ಗೆ ಕೆಆರ್‌ವಿ ಕನ್ನಡಿಗರ ಬಣ ಮನವಿ

Taluknewsmedia.com

ಸರ್ಕಾರಿ ಜಮೀನು ಕಬಳಿಕೆಯ ದೂರು: ನಕಲಿ ದಾಖಲೆ ಸೃಷ್ಟಿ ಬಗ್ಗೆ ಕೆಆರ್‌ವಿ ಕನ್ನಡಿಗರ ಬಣ ಮನವಿ

ದೊಡ್ಡಬಳ್ಳಾಪುರ: ಸರ್ಕಾರಿ ಗೋಮಾಳ ಜಮೀನನ್ನು ನಕಲಿ ದಾಖಲೆಗಳ ಆಧಾರದಲ್ಲಿ ಕಬಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ದ ನಾಯಕರು ದೊಡ್ಡಬಳ್ಳಾಪುರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, ಮುಖಂಡರು ಪಿ. ವಾಸು, ಜಿಲ್ಲಾ ಯುವಟಕ ಅಧ್ಯಕ್ಷ ರಂಜಿತ್ ಗೌಡ, ತಾಲೂಕು ಅಧ್ಯಕ್ಷ ವಿನಯ್ ಆರಾಧ್ಯ ಮತ್ತು ಕಾರ್ಯದರ್ಶಿ ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.

ಅವರ ಹೇಳಿಕೆಯ ಪ್ರಕಾರ, ಅರೆಹಳ್ಳಿಗುಡ್ಡದಹಳ್ಳಿಯ ಸರ್ವೇ ನಂ.57ರ 10 ಎಕರೆ ಗೋಮಾಳ ಜಮೀನಿಗೆ ಮ್ಯುಟೇಶನ್ ದಾಖಲೆಗಳಲ್ಲಿ ಕಾಣಿಸದ ಪುಟಗಳನ್ನು ನಕಲಿ ಸಹಿಗಳೊಂದಿಗೆ ಸೇರಿಸಿ ಹೊಸ ದಾಖಲೆ ಸೃಷ್ಟಿಸಲಾಗಿದೆ. ಈ ಅಕ್ರಮ ದಾಖಲೆಯ ಆಧಾರದಲ್ಲಿ ಭೂಗಳ್ಳರು ಸುಮಾರು 6 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ದೂರಿಸಲಾಯಿತು.

ವೇದಿಕೆಯ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಮಾತನಾಡುವಾಗ, ಬಾಶೆಟ್ಟಿಹಳ್ಳಿ ಕೈಗಾರಿಕಾ ವಲಯ ಹಾಗೂ ನಗರದ ಹೊರವಲಯದಲ್ಲಿ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನುಗಳನ್ನು ಕಬಳಿಸಲು ಭೂಗಳ್ಳರು ನಕಲಿ ದಾಖಲೆಗಳ ಸಹಾಯದಿಂದ ಖಾತೆ ವರ್ಗಾವಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇವರ ದೂರು ಆಧರಿಸಿ ಉಪವಿಭಾಗಾಧಿಕಾರಿ ಖಾತೆ ಮಾಡಿಕೊಡಲು ಆದೇಶಿಸಿದರೂ, ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಆ ಆದೇಶವನ್ನು ರದ್ದುಗೊಳಿಸಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿರುವುದನ್ನು ಅವರು ವಿವರಿಸಿದರು.

ಆದರೂ, ಭೂ ಸುರಾ ಯೋಜನೆಯ ದುರುಪಯೋಗ ಮಾಡಿ ಮತ್ತೊಮ್ಮೆ ನಕಲಿ ದಾಖಲೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ವೇದಿಕೆಯವರು ಆರೋಪಿಸಿದರು. ಈ ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಗಟ್ಟಿಯಾದ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಹೆಚ್ಚಿನ ಭದ್ರತೆಗಾಗಿ ಭೂ ಸುರಾ ಯೋಜನೆ ಅಡಿ ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಕೇಂದ್ರಗಳಲ್ಲೂ, ಹಳೆಯ ದಾಖಲೆ ಕೊಠಡಿಗಳಲ್ಲೂ ತಕ್ಷಣ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಮನವಿ ಮಾಡಲಾಯಿತು. ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆಯಲು ತಕ್ಷಣ ಪೊಲೀಸರಿಗೆ ದೂರು ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಇಟ್ಟರು.

Related posts