ಸುದ್ದಿ 

ಬೈಕ್ ಅಪಘಾತಕ್ಕೆ ರೈತ ಗಂಭೀರವಾಗಿ ಗಾಯ

Taluknewsmedia.com

ಬೈಕ್ ಅಪಘಾತಕ್ಕೆ ರೈತ ಗಂಭೀರವಾಗಿ ಗಾಯ

ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ರೈತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ನಿವಾಸಿ ವೆಂಕಯ್ಯ (65) ಎಂಬವರು ಮಧ್ಯಾಹ್ನ ತಮ್ಮ ಹೊಲಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ, ಮಲೆ ಮಹದೇಶ್ವರ ಬೆಟ್ಟದ ದಿಸೆಗೆ ಹೋಗುತ್ತಿದ್ದ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಇವರಿಗೆ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದಲ್ಲಿ ವೆಂಕಯ್ಯ ಅವರ ಕಾಲು ಮುರಿದು ಗಂಭೀರವಾಗಿ ನೋವಿನಿಂದ ತತ್ತರಿಸುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಹೈವೇ ಪೊಲೀಸ್ ಸಿಬ್ಬಂದಿ ಗಾಯಾಳುವನ್ನು ತಮ್ಮ ವಾಹನದಲ್ಲಿ ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕಾನೂನು ಕ್ರಮಗಳನ್ನು ಆರಂಭಿಸಿದ್ದಾರೆ.

Related posts