ನಾಗಮಂಗಲದಲ್ಲಿ ಆಟೋ ಡಿಕ್ಕಿಯಿಂದ ಮಹಿಳೆಗೆ ಗಾಯ: ಚಾಲಕನ ವಿರುದ್ಧ ಪ್ರಕರಣ ದಾಖಲು
ನಾಗಮಂಗಲ ಪಟ್ಟಣದಲ್ಲಿ ಸಂಭವಿಸಿದ ಅಜಾಗರೂಕ ಆಟೋ ಚಾಲನೆಯಿಂದ ಹಿರಿಯ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಹಿಳೆ ನಿಂಗಮ್ಮ , ಘಟನೆ ನಡೆದ ಸಮಯದಲ್ಲಿ ನಾಗಮಂಗಲ ಸರ್ಕಲ್ ಬಳಿಯ ಆಟೋ ಸ್ಟ್ಯಾಂಡ್ ಬಳಿ ಫುಟ್‌ಪಾತ್‌ನಲ್ಲಿ ನಿಂತು ಊರಿಗೆ ತೆರಳಲು ಆಟೋ ನಿರೀಕ್ಷಿಸುತ್ತಿದ್ದರು. ಈ ಸಂದರ್ಭ ಆಟೋ ಚಾಲಕ ಆಫ್ರಾಬ್ ಪಾಷ (ಕೆಎ-05-ಎಎ-2738 ನಂ. ವಾಹನದ ಚಾಲಕ) ನಿರ್ಲಕ್ಷ್ಯದಿಂದ ಹಾಗೂ ಅಜಾಗರೂಕತೆಯಿಂದ ಆಟೋವನ್ನು ರಿವರ್ಸ್ ಚಾಲನೆ ಮಾಡಿ ನಿಂಗಮ್ಮಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ನಿಂಗಮ್ಮ ಕೆಳಗೆ ಬಿದ್ದು ಸೊಂಟದ ಬಲಭಾಗ ಮತ್ತು ಬಲಗಾಲಿನ ತೊಡೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳದಲ್ಲೇ ಇದ್ದ ಸಂಬಂಧಿ ರಾಮೇಗೌಡ ಮತ್ತು ಆಟೋಚಾಲಕ ಗಾಯಾಳುವಿಗೆ ತಕ್ಷಣ ಸಹಾಯ ಮಾಡಿದ್ದು, ಅವರನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಶಿಕಲಾ ನರ್ಸಿಂಗ್ ಹೋಂ ಗೆ ಸ್ಥಳಾಂತರಿಸಲಾಗಿದೆ. ನಿಂಗಮ್ಮನ ಪುತ್ರ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅಪಘಾತಕ್ಕೆ ಕಾರಣರಾದ ಆಟೋ ಚಾಲಕ ಆಫ್ರಾಬ್ ಪಾಷ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಿದ್ದಾರೆ
ವರದಿ : ಧನುಷ್ ಎ ಗೌಡ. ಕಾಚೇನಹಳ್ಳಿ ತಾಲೂಕ್ ನ್ಯೂಸ್

