ಅಬುಧಾಬಿಯಲ್ಲಿ ಉದ್ಯೋಗದ ಹೆಸರಿನಲ್ಲಿ ನರ್ಸ್ಗೆ ಲಕ್ಷಾಂತರ ರೂ. ಸೈಬರ್ ವಂಚನೆ.
ಬೆಂಗಳೂರು: ಜೂನ್ 19 ವಿದೇಶದಲ್ಲಿ ಕೆಲಸದ ಆಸೆ ಇಟ್ಟುಕೊಂಡಿದ್ದ ಮಹಿಳಾ ನರ್ಸ್ರೊಬ್ಬರು shine.com ಮೂಲಕ ಅಬುಧಾಬಿಯಲ್ಲಿ ಉದ್ಯೋಗ ದೊರಕಿಸುವುದಾಗಿ ನಂಬಿಸಿ ದುಷ್ಕರ್ಮಿಗಳು ಹಾಕಿದ ಸೈಬರ್ ವಂಚನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಈ ವಂಚನೆ ಘಟನೆಯಿಂದಾಗಿ ಆರ್ತಿ ಯವರು ಸುಮಾರು ರೂ.98,224 ರೂಪಾಯಿ ಕಳೆದುಕೊಂಡಿದ್ದಾರೆ.ಆರ್ತಿಯು ಅಬುಧಾಬಿಯಲ್ಲಿ ಸ್ಟಾಫ್ ನರ್ಸ್ ಕೆಲಸಕ್ಕಾಗಿ ಹುಡುಕುತ್ತಿದ್ದು, ಲಿಂಕ್ಡಿಇನ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ 2025ರ ಮೇ 12ರಂದು ಬೆಳಿಗ್ಗೆ 11:05ಕ್ಕೆ, shine.com ತಾಣದಿಂದ ಕವಿತಾ ಎಂಬ ಮಹಿಳೆ ಕರೆಮಾಡಿ, ಅಬುಧಾಬಿಯಲ್ಲಿ ಉದ್ಯೋಗ ನೀಡುವುದಾಗಿ ತಿಳಿಸಿ UPI ID: Sea08@upi ಗೆ ರೂ.6,500 ರೆಜಿಸ್ಟ್ರೇಷನ್ ಶುಲ್ಕವಾಗಿ ಪಾವತಿಸಲು ಹೇಳಿದ್ದರು.ನಂತರ, ಅವರು HR ವಿಭಾಗದ ಸೆಂಥಿಲ್ ಎಂಬ ವ್ಯಕ್ತಿಯ ಸಂಪರ್ಕವನ್ನು ನೀಡಿದ್ದು, ಆ ವ್ಯಕ್ತಿಯೂ ವಂಚನೆಗೆ ಕೈಜೋಡಿಸಿದ್ದ. ಅವರು ಹಂತ ಹಂತವಾಗಿ ಹಣವನ್ನು ಬೇಡುತ್ತಾ, ಇತ್ಯರ್ಥವಿಲ್ಲದ ದಾಖಲೆಗಳ ಹೆಸರಿನಲ್ಲಿ ಮತ್ತಷ್ಟು ಮೊತ್ತಗಳನ್ನು – ರೂ.22,585, ರೂ.28,808 ಮತ್ತು ರೂ.40,331 – ಪಾವತಿಸಲು ಒತ್ತಾಯಿಸಿದರು.ಹೀಗೆ ಒಟ್ಟು ರೂ.98,224 ಹಣ ಪಾವತಿಸಿದ ಬಳಿಕ, ಇನ್ನೂ ಹೆಚ್ಚಿನ ಹಣವನ್ನು ಬೇಡುತ್ತಿದ್ದಾಗ ಆರ್ತಿ ಯವರಿಗೆ ಈ ಪ್ರಕರಣ ಸೈಬರ್ ವಂಚನೆಯೆಂದು ಅನುಮಾನ ಉಂಟಾಗಿ, ಕೂಡಲೇ ಹುಳಿಮಾವು ಪೊಲೀಸರಿಗೆ ದೂರು ನೀಡಲಾಯಿತು.
ಆರತಿ ಯವರು ತಮ್ಮ ದೂರಿನಲ್ಲಿ ಕವಿತಾ ಮತ್ತು ಸೆಂಥಿಲ್ ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

