ಎಚ್.ಎಸ್.ಆರ್ ಲೇಔಟ್ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವು
.ಬೆಂಗಳೂರು, ಜೂನ್ 21:ಎಚ್.ಎಸ್.ಆರ್ ಲೇಔಟ್ನ ನಿವಾಸಿ ಶ್ರೀಮತಿ ಜಮುನಾ ಅವರ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಅಪರಿಚಿತರು ಕಳುವು ಮಾಡಿಕೊಂಡು ಹೋಗಿರುವ ಘಟನೆ ಜೂನ್ 17ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ಹೆಚ್.ಎಸ್.ಆರ್ ಲೇಔಟ್ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಜಮುನಾ ಅವರು ಸುಮಾರು 8-9 ವರ್ಷಗಳಿಂದ ಬೆಂಗಳೂರು ನಗರದ ಎಚ್.ಎಸ್.ಆರ್ ಲೇಔಟ್, 6ನೇ ಸೆಕ್ಟರ್, 16ನೇ ಬಿ ಕ್ರಾಸ್, 5ನೇ ಮೇನ್ ರಸ್ತೆಯಲ್ಲಿರುವ ನಂ.470, 1ನೇ ಮಹಡಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದು, ಗೃಹಿಣಿಯಾಗಿದ್ದಾರೆ.ಜೂನ್ 17ರಂದು ಬೆಳಿಗ್ಗೆ 8:00ರಿಂದ 8:30ರ ನಡುವೆ ತಮ್ಮ ಸುಜುಕಿ ಆಕ್ಸೆಸ್ (ದೃಡೀಕರಣ ಸಂಖ್ಯೆ: KA05LX2577, ಬಣ್ಣ: ಕಪ್ಪು, ಮಾದರಿ: 2023, ಮೌಲ್ಯ: ₹77,000/-ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಲಾಗಿತ್ತು. ಆದರೆ ಅದೆ ದಿನ ಸಂಜೆ 6:00 ರಿಂದ 6:30ರ ನಡುವೆ ಅವರು ವಾಹನವನ್ನು ಪರಿಶೀಲಿಸಿದಾಗ ಅದು ಅಲ್ಲಿ ಕಾಣಿಸಿಕೊಂಡಿಲ್ಲ.ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದರೂ ವಾಹನದ ಪತ್ತೆಯಾಗದ ಕಾರಣ, ಯಾರೋ ಅಪರಿಚಿತರು ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿರುವ ಜಮುನಾ ಅವರು, ಪೊಲೀಸರು ಕೂಡಲೇ ಕಳವು ಮಾಡಿದವರನ್ನು ಪತ್ತೆ ಹಚ್ಚಿ, ತದನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.ಹೆಚ್.ಎಸ್.ಆರ್ ಲೇಔಟ್ನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

