ವಿವಾಹದ ನಂತರ ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ: ವರದಕ್ಷಿಣೆಗೆ ಬಲವಂತ, ಕೊನೆಗೆ ವಿಷ ಸೇವನೆ.
ನಾಗಮಂಗಲ ತಾಲ್ಲೂಕಿನ ಸುಖಧರೆ ಗ್ರಾಮದ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಗಂಡನ ಕುಟುಂಬದವರಿಂದ ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಪೀಡೆಗೆ ಒಳಗಾಗಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಸುಮಾ ಎಂ ಎಸ್ ಅವರ ಮಹಿಳೆಯು 2022ರಲ್ಲಿ ಸುನೀಲ್.ಎಸ್.ಎನ್ ಎಂಬವರೊಂದಿಗೆ ವಿವಾಹವಾದ ಬಳಿಕ, ಪ್ರಾರಂಭದಲ್ಲಿ ಮೂರು ತಿಂಗಳ ಕಾಲ ಸಹಜ ದಾಂಪತ್ಯ ಜೀವನ ನಡೆಸಿದರೂ ನಂತರದಿಂದವೇ ಅವರ ಅತ್ತೆ ಹಾಗೂ ಮಾವನಿಂದ ವರದಕ್ಷಿಣೆಗೆ ಒತ್ತಡ ಹೆಚ್ಚಾಗಿತ್ತು. ವರದಕ್ಷಿಣೆಗಾಗಿ ಬೈದು, ಅವಮಾನಿಸುವುದರ ಜೊತೆಗೆ, ಗಂಡನೂ ಸಹ ಜಮೀನು ಹೆಸರಿನಲ್ಲಿ ಬರೆಸಿಕೊಳ್ಳುವಂತೆ ಬಲವಂತ ಮಾಡಿದ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ.ಇದೇ ಹಿನ್ನೆಲೆಯಲ್ಲಿ ಪತ್ನಿ ವಿರುದ್ದ ಹಲ್ಲೆ ನಡೆಸಿದ ಸಂದರ್ಭ, ಮಾನಸಿಕವಾಗಿ ಸಹಿಸಲಾಗದೆ ವಿಷ ಸೇವಿಸಿದ ಮಹಿಳೆಯನ್ನು ಗಂಡನೇ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಳಿಕ, ಗಂಡನ ಕುಟುಂಬದಿಂದ ದೂರವಿರುವ ವೇಳೆ, ಪತ್ನಿಗೆ ವಿಚ್ಛೇದನ ನೋಟಿಸ್ ಕಳಿಸಲಾಗಿದೆ ಹಾಗೂ ಬಟ್ಟೆಗಳನ್ನು ಮನೆ ಹೊರಗೆ ಬಿಸಾಡಿರುವ ಘಟನೆಯೂ ನಡೆದಿದೆ.ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ಪತಿಯು ಹಾಗೂ ಅವರ ಪೋಷಕರು, ನಿಂದನೆ, ದೈಹಿಕ ಹಲ್ಲೆ, ಮಾನಸಿಕ ಪೀಡೆ, ಮತ್ತು ಕೊನೆಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪ ಹೊರಿಸಿದ್ದಾರೆ.ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ IPC 498A, Dowry Prohibition Act, 323, 504, 506 ಮತ್ತು 306 ಕಲಂಗಳಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ವರದಿ :ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್ 9481838703

