ನಾಗಮಂಗಲದಲ್ಲಿ ಎರಡು ಕಾರುಗಳ ನಡುವೆ ಅಪಘಾತ : ತಪ್ಪಿದ ಪ್ರಾಣಾಪಾಯ
ನಾಗಮಂಗಲ-ಮಂಡ್ಯ ರಸ್ತೆ ವೆಂಕಟೇಶ್ವರ ಟಾಕೀಸ್ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ನಷ್ಟ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.ಎನ್.ಜಿ. ನಾಗೇಗೌಡ (62), ನಾಗೇಗೌಡನಪಾಳ್ಯ ಗ್ರಾಮದ ರೈತರೊಬ್ಬರು, ತಮ್ಮ ಕುಟುಂಬ ಸಮೇತ ಇನ್ನೊವಾ ಕ್ರಿಸ್ತಾ ಕಾರಿನಲ್ಲಿ (KA-06 Z-4681) ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರಿಗೆ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರನ್ನು ಅವರ ಮಗ ಗೋವಿಂದರಾಜು ಚಾಲನೆ ಮಾಡುತ್ತಿದ್ದರು.ವೆಂಕಟೇಶ್ವರ ಟಾಕೀಸ್ ಹತ್ತಿರ ಟಿಎನ್-04 ಎಜೆ-8928 ಸಂಖ್ಯೆದ ಮಾರುತಿ ರಿಡ್ಜ್ ಕಾರು ನಿರ್ಲಕ್ಷ್ಯದಿಂದ ಯು-ಟರ್ನ್ ತೆಗೆದುಕೊಂಡಾಗ ಇನ್ನೊವಾ ಕಾರಿಗೆ ಬಲಭಾಗದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯಿಂದ ಇನ್ನೊವಾ ಕಾರಿನ ಎರಡೂ ಬಲಭಾಗದ ಬಾಗಿಲುಗಳು ಜಖಂಗೊಂಡಿದ್ದು, ಮಾರುತಿ ಕಾರಿನ ಮುಂಭಾಗದ ಬಂಪರ್ ಹಾಗೂ ಚಾಸಿಸು ಧ್ವಂಸವಾಗಿದೆ.ಘಟನೆಯ ನಂತರ ಎರಡೂ ವಾಹನದ ಚಾಲಕರು ವಾಹನಗಳನ್ನು ರಸ್ತೆಯ ಪಕ್ಕ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಸದ್ಯಕ್ಕೆ ಯಾವುದೇ ವ್ಯಕ್ತಿಗೆ ಗಂಭೀರ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ, ನಾಗೇಗೌಡ ಏನ್ ಜಿ ಅಪಘಾತಕ್ಕೆ ಕಾರಣವಾದ ಮಾರುತಿ ಕಾರಿನ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರೆದಿದೆ.
ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್ 9481838705

