ಸುದ್ದಿ 

ಜಾಮೀನಿನ ನಿಯಮ ಉಲ್ಲಂಘಿಸಿದ ಆರೋಪಿಗೆ ಮತ್ತೆ ದಸ್ತಗಿರಿ – ಬಿಡದಿ ಪೊಲೀಸರು ತಕ್ಷಣದ ಕ್ರಮ

Taluknewsmedia.com

392 ಐಪಿಸಿ ಕಾಲಂ ಅಡಿಯಲ್ಲಿ ದೂರು ದಾಖಲಾಗಿದ್ದ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಜಯ್ ಕುಮಾರ್ (28), ನ್ಯಾಯಾಲಯದ ಜಾಮೀನಿನ ನಿಯಮಗಳನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ, ಬಿಡದಿ ಠಾಣಾ ಪೊಲೀಸರು ಆತನನ್ನು ಮರುದಸ್ತಗಿರಿ ಮಾಡಿದ್ದಾರೆ.

ಅಜಯ್ ಕುಮಾರ್, ಮಡಿವಾಳ ಜನಾಂಗದವನು, ಕೆಂಗೇರಿ ಉಪನಗರದ ಬಂಡೆಮಠದ ಬಳಿಯ 1ನೇ ಅಡ್ಡರಸ್ತೆಯ ನಿವಾಸಿಯಾಗಿದ್ದು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುತ್ತಿದ್ದ. ಆತನ ವಿರುದ್ಧದ ಪ್ರಕರಣಗಳು ಬಿಡದಿ ಪೊಲೀಸ್ ಠಾಣೆಯಲ್ಲಿ ಮೊ.ನಂ-57/2021 ಹಾಗೂ ಮೊ.ನಂ-323/2021 ರಂತೆ ದಾಖಲಾಗಿದ್ದು, ಸುತ್ತೋಲೆ ಪ್ರಕರಣಗಳು ಕ್ರಮವಾಗಿ ಸಿ.ಸಿ ನಂ-09/2022 ಮತ್ತು ಸಿ.ಸಿ ನಂ-20/2022 ರಂತೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ.

ಆರೋಪಿ ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿರುವುದರಿಂದ, ನ್ಯಾಯಾಲಯವು ಈಗಾಗಲೇ ಎರಡು ಉದ್ಘೋಷಣೆಗಳನ್ನು ಹೊರಡಿಸಿದ್ದರ ಬಗ್ಗೆ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಮೊ.ನಂ-57/2021 ಪ್ರಕರಣದಲ್ಲಿ 2024ರ ಫೆಬ್ರವರಿ 8ರಂದು ಹಾಗೂ ಮೊ.ನಂ-323/2021 ಪ್ರಕರಣದಲ್ಲಿ 2023ರ ಆಗಸ್ಟ್ 24ರಂದು ಉದ್ಘೋಷಣೆಯನ್ನು ಜಾರಿಗೆ ತಂದಿರುವುದಾಗಿ ವರದಿಯಿದೆ.

ಜೂನ್ 19ರ ಬೆಳಿಗ್ಗೆ, ಬೈರಮಂಗಲ ಗ್ರಾಮದ ವಾಲಿಬಾಲ್ ಮೈದಾನದ ಬಳಿ ಆರೋಪಿಯು ಇರುವ ಮಾಹಿತಿ ಮೇರೆಗೆ, ಬಿಡದಿ ಠಾಣೆಯ ಎ.ಎಸ್.ಐ ಪ್ರಕಾಶ್ ಕುಮಾರ್ ಹಾಗೂ ಪಿಸಿ-376 ಕಾಂತರಾಜು ಆತನನ್ನು ಬೆಳಿಗ್ಗೆ 10:15ರ ಹೊತ್ತಿಗೆ ವಶಕ್ಕೆ ಪಡೆದು, 10:45ಕ್ಕೆ ಠಾಣೆಗೆ ಕರೆತಂದರು. ಬಳಿಕ ಮದ್ಯಾಹ್ನ 12:15ಕ್ಕೆ ಆರೋಪಿಯನ್ನು ಮರುದಸ್ತಗಿರಿ ಮಾಡಿದ ಬಗ್ಗೆ ಪ್ರಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

Related posts