28 ವರ್ಷದ ಯುವತಿ ಅನುಶ್ರೀ ನಾಪತ್ತೆ – ಕುಟುಂಬಸ್ಥರಿಂದ ಪೊಲೀಸ್ ತನಿಖೆಗೆ ಮನವಿ..
ನಗರದ ಸರ್ಜಾಪುರ ಮುಖ್ಯರಸ್ತೆಯ ಮುಳ್ಳೂರು ಕಾಲೋನಿಯಲ್ಲಿ ವಾಸಿಸುತ್ತಿರುವ ನಾರಾಯಣಪ್ಪ ಎಂಬುವವರು ತಮ್ಮ 28 ವರ್ಷದ ಮಗಳು ಅನುಶ್ರೀ ಎನ್. ನಾಪತ್ತೆಯಾಗಿರುವ ಬಗ್ಗೆ ಹೆಚ್.ಎಸ್.ಆರ್ ಲೇಔಟ್ನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅನುಶ್ರೀ ಹೆಚ್.ಎಸ್.ಆರ್ ಲೇಔಟ್ನ URR ರಾಯಲ್ ಕಾಂಪ್ಲೆಕ್ಸ್ನಲ್ಲಿ ಇರುವ ಟೆಟ್ರೋ ಪಾರ್ಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಿನ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ತೆರಳಿ ಸಂಜೆ 7:30ರ ವೇಳೆಗೆ ಮನೆಗೆ ಹಿಂದಿರುಗುತ್ತಿದ್ದರು. ಆದರೆ, ಜೂನ್ 18ರಂದು ಬೆಳಿಗ್ಗೆ 9 ಗಂಟೆಗೆ ಕ್ಯಾಬ್ನಲ್ಲಿ ಮನೆಯಿಂದ ಹೊರಟ ನಂತರ ಅವರು ವಾಪಸ್ ಮನೆಗೆ ಬಂದಿಲ್ಲ.
ಆ ದಿನ ಸಾಯಂಕಾಲ 8 ಗಂಟೆಗೆ ಕುಟುಂಬದವರು ಅನುಶ್ರೀ ಅವರ ಮೊಬೈಲ್ ಸಂಖ್ಯೆ ಗೆ ಕರೆಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದು ಬಂದಿದೆ. ಮರುದಿನ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಅವರು ಆ ದಿನ ಮಧ್ಯಾಹ್ನ ರಜೆ ಹಾಕಿ ಹೊರಟಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸಂಬಂಧಿಕರು ಮತ್ತು ಸ್ನೇಹಿತರನ್ನು ಸಂಪರ್ಕಿಸಿದರೂ ಅನುಶ್ರೀ ಅವರ ಸುಳಿವು ಸಿಗಲಿಲ್ಲ.
ಅನುಶ್ರೀ ಅವರು ಸುನಿಲ್ ಕುಮಾರ್ ಎಂಬ ಕ್ಯಾಬ್ ಡ್ರೈವರ್ನೊಂದಿಗೆ ಹೋಗಿರಬಹುದೆಂಬ ಅನುಮಾನವನ್ನು ನಾರಾಯಣಪ್ಪ ಅವರು ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ಮಗಳನ್ನು ಶೀಘ್ರ ಪತ್ತೆ ಹಚ್ಚಿ ಕೊಡಬೇಕೆಂದು ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಕಾಣೆಯಾದ ಯುವತಿಯ ವಿವರಗಳು:
ಹೆಸರು: ಅನುಶ್ರೀ ಎನ್.
ವಯಸ್ಸು: 28 ವರ್ಷ
ಚಹರೆ: ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು
ಭಾಷೆ: ಕನ್ನಡ, ಇಂಗ್ಲಿಷ್, ಹಿಂದಿ
ಉಡುಪು: ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್
ಈ ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರುವವರು ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

