ಅಕ್ರಮ ಸಾರಾಯಿ ಸಾಗಣೆ: ಪೊಲೀಸ್ ಪೆಟ್ರೋಲಿಂಗ್ ವೇಳೆ ಪತ್ತೆ, ಪ್ರಕರಣ ದಾಖಲು
ಹುಬ್ಬಳ್ಳಿ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ನೇಕಾರ ನಗರ ಬೆಳಗಲಿ ರಸ್ತೆ ಅಮರಜ್ಯೋತಿ ಕಾಲನಿಯಲ್ಲಿ ಅಕ್ರಮ ಸಾರಾಯಿ ಸಂಗ್ರಹಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ದಿನಾಂಕ 18.06.2025 ರಂದು ಹಳೇಹುಬ್ಬಳ್ಳಿ ಠಾಣೆಯ ಅಧಿಕಾರಿಯ ಆದೇಶದ ಮೇರೆಗೆ, ಸಿಪಿಸಿಗಳಾದ 2753 ಹಾಗೂ 2919 ರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕಾರ್ಯದಲ್ಲಿದ್ದ ಪೊಲೀಸ್ ಅಧಿಕಾರಿ, ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಮರಜ್ಯೋತಿ ಕಾಲನಿಯಲ್ಲಿರುವ ಸ್ಥಳದಲ್ಲಿ ಒಂದು ಖಚಿತ ಮಾಹಿತಿ ದೊರೆತಿದ್ದು, ವ್ಯಕ್ತಿಯೊಬ್ಬನು ತನ್ನ ಲಾಭಕ್ಕಾಗಿ ಅಕ್ರಮವಾಗಿ ಅಬಕಾರಿ ಸರಕು ಸಾರಾಯಿ ಸಂಗ್ರಹಿಸಿ ಜನರಿಗೆ ಮಾರಾಟ ಮಾಡುತ್ತಿದ್ದಾನೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
, ಆರೋಪಿತನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ, 1965ರ ಕಲಂ 32 ಮತ್ತು 34ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಪರವಾಗಿ ದೂರು ದಾಖಲಿಸಲಾಗಿದೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

