ಕಳ್ಳತನದ ಪ್ರಯತ್ನ ವಿಫಲ – ಅಪರಿಚಿತನ ಓಡಾಟ..
ನಗರದ ಬಂಕಾಪುರ ಚೌಕ್ ನಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಒಂದರಲ್ಲಿ ದಿನಾಂಕ 16-06-2025ರಂದು ಬೆಳಗಿನ ಜಾವ 3-00 ಗಂಟೆಯ ಸುಮಾರಿಗೆ ಕಳ್ಳತನದ ಪ್ರಯತ್ನ ನಡೆದಿದ್ದು, ಎಟಿಎಂ ಅಲಾರಂ ಬೀಗಿದ ತಕ್ಷಣ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ.ಪಿಯಾರ್ದಿದಾರರಾದ ಶ್ರೀ ಮಂಜು ಬಿ., ಹಿರಿಯ ಕಾರ್ಯನಿರ್ವಾಹಕ – ಕ್ಷೇತ್ರ ಸೇವೆ, ರೈಟರ್ ಬಿಸಿನೆಸ್ ಸರ್ವಿಸಸ್ ಪ್ರೈ. ಲಿಮಿಟೆಡ್, ಮುಂಬೈ ಇವರಿಂದ ಈ ಕುರಿತು ದೂರು ನೀಡಲಾಗಿದ್ದು, ಅವರು ಬಿಹೆಚ್ ಇಇಎಲ್ ಲೇಔಟ್, ಆರ್ ಆರ್ ನಗರ, ಬೆಂಗಳೂರು ನಿವಾಸಿಯಾಗಿದ್ದಾರೆ.ದೂರುನ ವಿವರಗಳ ಪ್ರಕಾರ, ಹುಬ್ಬಳ್ಳಿಯ ರೈತ ಸಂಘ, ಯಲಾಪುರ ಬೀದಿ, ಬಂಕಾಪುರ ಚೌಕ್, ಪಿ.ಬಿ. ರಸ್ತೆಯಲ್ಲಿ ನೆಲೆಸಿರುವ ಕೆನರಾ ಬ್ಯಾಂಕ್ ಎಟಿಎಂ (ಐಡಿ: 0595 WS01) ಅನ್ನು ಗುರುತಿಸಲು ಆಯ್ಕೆಯಾಗಿತ್ತು. ಅಪರಿಚಿತ ವ್ಯಕ್ತಿ ಎಟಿಎಂ ಯಂತ್ರದ ಯುಟಿಐ ಮತ್ತು ಪಿಐಆರ್ ಕೇಬಲ್ ತೆಗೆದು ಹಾಕಿ, ಪ್ರೆಂಟ್ ಡೋರ್ ಲಾಕ್ ಮುರಿಯುವ ಮೂಲಕ ಒಳಗೆ ಇಟ್ಟ ಹಣವನ್ನು ಕಳವು ಮಾಡುವ ಯತ್ನ ನಡೆಸಿದನು.ಆದರೆ ಎಟಿಎಂನಲ್ಲಿ ಅಳವಡಿಸಲಾದ ಅಲಾರಂ ವ್ಯವಸ್ಥೆ ಕಾರ್ಯನಿರ್ವಹಿಸಿ ತಕ್ಷಣ ಜೋರಾಗಿ ಸದ್ದು ಮಾಡಿದ ಕಾರಣ, ಆತ ಕೃತ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿಲ್ಲ ಮತ್ತು ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದನು.
ಈ ಕುರಿತು ಸಂಸ್ಥೆಯ ಉನ್ನತ ಅಧಿಕಾರಿಗಳ ಅನುಮತಿಯೊಂದಿಗೆ ಇದೀಗ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಸ್ಥಳೀಯ ಪೊಲೀಸರು ಸಾರ್ವಜನಿಕರಲ್ಲಿ ಎಚ್ಚರಿಕೆ ವಹಿಸಲು ಹಾಗೂ ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

