ಸುದ್ದಿ 

ಹುಬ್ಬಳ್ಳಿಯಲ್ಲಿ ಅತಿವೇಗದ ಕಾರು ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

Taluknewsmedia.com

ಹುಬ್ಬಳ್ಳಿ, ಜೂನ್ 24: ದಿನಾಂಕ 20/06/2025 ರಂದು ಮಧ್ಯಾಹ್ನ 3.10 ಗಂಟೆ ಸುಮಾರಿಗೆ ಹುಬ್ಬಳ್ಳಿ ನಗರದ ದೇಸಾಯಿ ಅಂಡರ್‌ಬ್ರಿಡ್ಜ್ ಹತ್ತಿರ ಗಂಭೀರ ರಸ್ತೆ ಅಪಘಾತ ಸಂಭವಿಸಿದೆ. ಕಲಾಪೂರ ಎಸ್.ಕೆ. (ತಾ: ಬಾದಾಮಿ) ನಿವಾಸಿಯಾಗಿರುವ ಪೂರ್ಣಾನಂದ ರಂಗಪ್ಪ ಕರಡಿಗುಡ್ಡ (ವಯಸ್ಸು: 31), ಅವರು ಚಾಲನೆ ಮಾಡುತ್ತಿದ್ದ ಕಾರು (ನಂ: ಕೆಎ 29 ಎನ್ 5864) ಸರ್ವೋದಯ ಸರ್ಕಲ್ ಕಡೆಯಿಂದ ಕ್ಲಬ್ ರಸ್ತೆ ಮುಖಾಂತರ ವೇಗ ಮತ್ತು ದುಡುಕಿನ ಚಾಲನೆಯಿಂದ ಬರುತ್ತಿದ್ದಾಗ, ನಿಯಂತ್ರಣ ತಪ್ಪಿ ಮುಂದೆ ನಿಂತಿದ್ದ ಎರಡು ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಪಿರ್ಯಾದಿಕಾರರಾದ ಅನಿಲಕುಮಾರ ಮಿಸಿನ ಅವರ ಪತ್ನಿ ರೂಪಾ ಮಿನ ಅವರು ಸ್ಕೂಟರ್ (ನಂ: ಕೆಎ 63 ಎಸ್ 6386) ಮೇಲೆ ಪ್ರಯಾಣಿಸುತ್ತಿದ್ದು, ಟ್ರಾಫಿಕ್ ಪೊಲೀಸ್ ಸೂಚನೆಯನ್ನು ಪಾಲಿಸಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರ ವಾಹನದ ಹಿಂದಿನ ಭಾಗಕ್ಕೆ ಡಿಕ್ಕಿಯಾಗಿ, ರೂಪಾ ಮಿನ ಅವರನ್ನು ರಸ್ತೆಗೆ ಕೆಡವಿ, ನಂತರ ಕಾರಿನ ಮುಂಭಾಗದಿಂದ ಬಡಿದಿದೆ.

ಈ ಅಪಘಾತದಲ್ಲಿ ರೂಪಾ ಮಿನ ಅವರಿಗೆ ಎಡ ಮೊಣಕೈಗೆ ತೆರೆಚಿದ ಗಾಯ, ಬಲಗೈ ಮೊಣಭಾಗದಲ್ಲಿ ರಕ್ತಗಾಯ, ಎಡ ಹಾಗೂ ಬಲಗಾಲ ಚಪ್ಪೆಯಲ್ಲಿ ಭಾರಿ ಒಳಪೆಟ್ಟು, ಸೊಂಟದ ಹಿಂದೆ ರಕ್ತಗಾಯ ಹಾಗೂ ಎರಡೂ ಮೊಣಕಾಲುಗಳಿಗೆ ತೆರೆಚಿದ ಗಾಯಗಳಾಗಿವೆ. ಅಲ್ಲದೆ, ಅವರ ಸ್ಕೂಟರ್ ಹಾಗೂ ಕಾರು ಎರಡೂ ಜಖಂಗೊಂಡಿವೆ.

ಆಪಾದಿತ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

Related posts