ಸುದ್ದಿ 

ಮಹಿಳೆ ಕಾಣೆ ಪ್ರಕರಣ – ಪತಿಯು ಪೊಲೀಸರಿಗೆ ದೂರು ನೀಡಿದ ಘಟನೆ

Taluknewsmedia.com

ಹುಬ್ಬಳ್ಳಿ, ಜೂನ್ 26: ನಗರದ ಮಂಟೂರ ರಸ್ತೆ, ಭಾರತ ನಗರ, ಹೊಸ ಚರ್ಚ್ ಹತ್ತಿರ ವಾಸವಿರುವ ಯುವತಿಯೊಬ್ಬರು ಅನಿರೀಕ್ಷಿತವಾಗಿ ಮನೆಯಿಂದ ಕಾಣೆಯಾದ ಪ್ರಕರಣ ಇಂದು ಬೆಳಕಿಗೆ ಬಂದಿದೆ.ಈ ಕುರಿತು ಪ್ರಕರಣ ದಾಖಲಿಸಿರುವವರು ಶ್ರೀ ಜಮೀರಅಹಮ್ಮದ ತಂದೆ ದಾದಾಪೀರ ಬೇಪಾರಿ (ವಯಸ್ಸು: 32 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಸ್ಟೀಲ್ ಫರ್ನಿಚರ್ ಕೆಲಸಗಾರ, ನಿವಾಸಿ: ಮಂಟೂರ ರೋಡ್, ಭಾರತ ನಗರ, ಹೊಸನ ಚರ್ಚ್ ಹತ್ತಿರ, ಹುಬ್ಬಳ್ಳಿ. ಇವರು ಪೊಲೀಸ ಠಾಣೆಗೆ ನೀಡಿರುವ ದೂರು ಪ್ರಕಾರ, ಅವರ ಪತ್ನಿಯಾದ ನಜಮಾಬಾನು (ವಯಸ್ಸು: 28 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಮನೆಕೆಲಸದವರು, ದಿನಾಂಕ 19-06-2025 ರಂದು ಮಧ್ಯಾಹ್ನ 1.30 ರಿಂದ ರಾತ್ರಿ 9.00 ಗಂಟೆಯೊಳಗೆ ತಮ್ಮ ನಿವಾಸದಿಂದ ಯಾರಿಗೂ ತಿಳಿಸದೇ ಎಲ್ಲಿಯೋ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಅವರು ಮನೆಗೆ ಹಿಂತಿರುಗದೆ, ಬಹಳ ಕಾಲವಾದರೂ ಪತ್ತೆಯಾಗದ ಕಾರಣ ತಮ್ಮ ಪತ್ನಿಯನ್ನು ಎಲ್ಲ ಕಡೆಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲವೆಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪತ್ನಿಯು ಬೇಗನೆ ಪತ್ತೆಯಾಗಲಿ ಎಂಬ ಆಶಯದಿಂದ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

Related posts