ಮಗಳು ಕಾಣೆಯಾದ ಕುರಿತು ತಂದೆಯಿಂದ ದೂರು..
ಮಗಳು ಕಾಣೆಯಾದ ಕುರಿತು ತಂದೆಯಿಂದ ದೂರು
ಈ ದಿನ 25-06-2025 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ, ಪಿರ್ಯಾದಿದಾರರ ಮಗಳಾದ ಅನುಷಾ, ತಂದೆ ಗೋಕುಲ ಸುತಾರ, ವಯಸ್ಸು 19 ವರ್ಷ, ಇವಳು ಮನೆಯವರಿಗೆ ತಿಳಿಸದೆ ಹೊರಗೆ ಹೋಗಿದ್ದಾಳೆ.
ಮೂಲತಃ, ಈಕೆ ತನ್ನ ಗೆಳತಿಯರ ಮನೆಯಲ್ಲಿ ಇದ್ದಿರಬಹುದೆಂದು ಮನೆಯವರು ಮೊದಲಿಗೆ ಶಂಕಿಸಿ ಸುಮ್ಮನಿದ್ದರು. ಆದರೆ ಬಹುಸಮಯವಾದರೂ ಅನುಷಾ ಮನೆಗೆ ವಾಪಸ್ಸು ಬಾರದೇ ಇದ್ದುದರಿಂದ, ಮನೆಯವರು ಮತ್ತು ಸಂಬಂಧಿಕರು ಸೇರಿ ಎಲ್ಲೆಡೆ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿಲ್ಲ.
ಅಲ್ಲದೆ, ಸಂಬಂಧಿಕರು ಹಾಗೂ ಗೆಳತಿಯರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ಯಾರಿಗೂ ಅನುಷಾದ ಬಗ್ಗೆ ಮಾಹಿತಿ ಇಲ್ಲವೆಂದು ತಿಳಿದುಬಂದಿದೆ. ಈ ಹಿನ್ನೆಲೆಪರವಾಗಿ, ತನ್ನ ಮಗಳು ಅನುಷಾ ಕಾಣೆಯಾಗಿರುವ ಬಗ್ಗೆ ಪತ್ತೆಹಚ್ಚಿ ಮನೆಗೆ ವಾಪಸ್ಸು ಕರೆತರಲಿ ಎಂಬ ಮನವಿಯಿಂದ ಪಿರ್ಯಾದಿದಾರರು ಸಂಬಂಧಿತ ಪೊಲೀಸರಿಗೆ ದೂರು ನೀಡಿರುವುದು ತಿಳಿದುಬಂದಿದೆ.
ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

