ಅನಧಿಕೃತ ಮದ್ಯ ಮಾರಾಟ: ವಿದ್ಯಾನಗರದಲ್ಲಿ ಏಸಿಪಿ ನೇತೃತ್ವದಲ್ಲಿ ದಾಳಿ, ಒಬ್ಬ ವ್ಯಕ್ತಿ ಬಂಧನ
ಹುಬ್ಬಳ್ಳಿ, ಜೂನ್ 26: ಬೆಳಿಗ್ಗೆ 08.15 ಗಂಟೆಯ ಸಮಯದಲ್ಲಿ ಮಾರ್ನಿಂಗ್ ರೌಂಡ ಕರ್ತವ್ಯದಲ್ಲಿದ್ದ ಸಿಇಎನ್ ಕ್ರೈಂ ಠಾಣೆಯ ಎಸಿಪಿ ಶ್ರೀ ಎಸ್.ಕೆ. ಕಟಕಬಾವಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ವಿದ್ಯಾನಗರದ ಅಂಬಿಕಾ ವೈನ್ಯ ಪಕ್ಕದ ಕೋಣೆಯಲ್ಲಿ ನಡೆಸಿದ ದಾಳಿಯಲ್ಲಿ, ವಾಸು ತಂದೆ ವಿಷು ರಾವ್ ಕಲಾಲದೊಡಮನಿ ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿತನು ಯಾವುದೇ ಪಾಸ್ ಅಥವಾ ಪರಮಿಟ್ ಇಲ್ಲದೇ ತನ್ನ ಸ್ವಂತ ಪಾಯ್ದೆಗೊಸರಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಮಧ್ಯ ಸೇವನೆಗೆ ಅವಕಾಶ ನೀಡುವ ಉದ್ದೇಶದಿಂದ ಮೂರು ರಟ್ಟಿನ ಬಾಕ್ಸ್‌ಗಳಲ್ಲಿ ಟೆಟ್ರಾ ಪ್ಯಾಕ್ ಮದ್ಯವನ್ನು ಇಟ್ಟುಕೊಂಡು ಮಾರಾಟಕ್ಕೆ ಹೊಂದಿಸಿದ್ದನ್ನೂ ಅಧಿಕಾರಿಗಳು ಸ್ಥಳದಲ್ಲಿಯೇ ಪತ್ತೆ ಹಚ್ಚಿದರು.
ಈ ಕುರಿತು ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು ಆರೋಪಿತನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 15(ಎ), 32 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಪರವಾಗಿ ಅಧಿಕೃತ ಫಿರ್ಯಾದಿ ನೀಡಲಾಗಿದೆ.
ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

