ಸುದ್ದಿ 

ಅಪ್ರಾಪ್ತ ಬಾಲಕಿ ರಕ್ಷಿತಾ ವಿವಾಹ ಪ್ರಕರಣ: ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಕ್ರಮ

Taluknewsmedia.com

ಅಪ್ರಾಪ್ತ ವಯಸ್ಸಿನ ಬಾಲಕಿಯಾದ ಕುಮಾರಿ ರಕ್ಷಿತಾ (ವಯಸ್ಸು: 14 ವರ್ಷ), ತಂದೆ: ಈರಣಾ, ಇಂಗೋಳಿ, ವಿಳಾಸ: ಹೊಸಯಲಾಪೂರ, ಬನಶಂಕರಿ ದೇವಸ್ಥಾನದ ಹತ್ತಿರ, ನೇಕಾರ ಓಣಿ, ಧಾರವಾಡ – ಈಕೆಯ ವಿವಾಹ ಮಾಡಿರುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ಶನಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಎಚ್.ಹೆಚ್. ಕೂಕನೂರ ಅವರ ಮೊಬೈಲ್ ಸಂಖ್ಯೆ ಗೆ ವಾಟ್ಸಪ್ ಮೂಲಕ ಒಂದು ಭಾವಚಿತ್ರ ಸಹಿತ ಸಂದೇಶ ಬಂದಿತ್ತು.

ಈ ಕುರಿತು ಅವರು ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರಕಾಶ ಕೊಡಿವಾಡ ಮತ್ತು ಸಂಬಂಧಪಟ್ಟ ಪಿರ್ಯಾದಿದಾರರಿಗೆ ಮಾಹಿತಿಯನ್ನು ಹಂಚಿದರು. ಇದರ ಪ್ರಕಾರ, ದಿನಾಂಕ: 20-06-2025 ರಂದು ಸಂಬಂಧಪಟ್ಟವರು ರಕ್ಷಿತಾ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಶಾಲಾ ದಾಖಲಾತಿ ಆಧಾರವಾಗಿ ಅವಳ ಜನ್ಮ ದಿನಾಂಕ 03-08-2010 ಎಂಬುದಾಗಿ ದೃಢಪಡಿಸಿದರು.

ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ರಕ್ಷಿತಾ ಅವರ ಪೋಷಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪಿರ್ಯಾದಿದಾರರು ಶಿಫಾರಸು ಸಲ್ಲಿಸಿದ್ದು, ಈಗಲೇ ತನಿಖಾ ಪ್ರಕ್ರಿಯೆ ಆರಂಭವಾಗಿದೆ.

ಬಾಲ್ಯ ವಿವಾಹದಂತಹ ಘಟನೆಗಳನ್ನು ತಡೆಯಲು ಹಾಗೂ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾಧಿಕಾರಿಗಳು ಮತ್ತು ಮಕ್ಕಳ ರಕ್ಷಣಾ ಘಟಕ ಸದಾ ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ.

ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

Related posts