ಸುದ್ದಿ 

ಮನೆಯಿಂದ ಕಾಣೆಯಾದ 15 ವರ್ಷದ ಬಾಲಕಿ – ತಾಯಿಯ ಮನವಿಗೆ ಪೋಲಿಸರ ಗಮನ

Taluknewsmedia.com

ದೇವನಹಳ್ಳಿ ತಾಲೂಕಿನ ಹೀರಾ ನಂದಿನಿ ಅಪಾರ್ಟ್ಮೆಂಟ್‌ನಿಂದ 15 ವರ್ಷದ ಬಾಲಕಿ ಕಾಣೆಯಾಗಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ತಾಯಿ ಠಾಣೆಗೆ ನೀಡಿದ ದೂರಿನ ಪ್ರಕಾರ, ಬಾಲಕಿ ನೀಲುಫರ್ ಬಿ, ಈ ವರ್ಷ 10ನೇ ತರಗತಿ ಪರೀಕ್ಷೆ ನಿರ್ವಹಿಸಿದ್ದರೂ ಉತ್ತೀರ್ಣವಾಗಿಲ್ಲ. ಈಗಾಗಲೇ ಶಾಲೆಯಿಂದ ವಿರಾಮ ತೆಗೆದುಕೊಂಡು ಮನೆಯಲ್ಲಿಯೇ ಟ್ಯೂಷನ್ ಪಡೆಯುತ್ತಿದ್ದಳು.

ದಿನಾಂಕ 18-06-2025 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ತಾಯಿ ಅನಾರೋಗ್ಯದಿಂದ ಮಲಗಿದ್ದು, ಆಕೆ ಮಗಳೊಂದಿಗೆ ಮಲಗಿದ್ದಾಳೆ. ಮದ್ಯಾಹ್ನ 1:30ರ ಸುಮಾರಿಗೆ ಟ್ಯೂಷನ್ ಶಿಕ್ಷಕ ಮನೆಗೆ ಬಂದು ಬಾಗಿಲು ತಟ್ಟಿದಾಗ ತಾಯಿ ಎದ್ದಿದ್ದು, ಮಗಳು ಮನೆಯಲ್ಲಿಲ್ಲವನ್ನೂ ಅರಿತು ಅಚ್ಚರಿಗೊಂಡಿದ್ದಾರೆ. ತಕ್ಷಣ ತಾಯಿ ಹಾಗೂ ಕುಟುಂಬಸ್ಥರು ಬಾಗಲೂರು, ಬಾಗಲೂರು ಕ್ರಾಸ್, ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಹುಡುಕಾಟ ನಡೆಸಿದರೂ ನೀಲುಫರ್ ಸಿಗಲಿಲ್ಲ.

ಮಗಳ ಮೊಬೈಲ್ ಸಂಖ್ಯೆ 8971412663 ಸಂಪರ್ಕ ಸಾಧ್ಯವಿಲ್ಲದೆ ಸಿಚ್‌ಆಫ್ ಆಗಿದ್ದು, ಯಾವುದೇ ಸಂಪರ್ಕವೂ ಸಾಧ್ಯವಾಗಿಲ್ಲ. ಕುಟುಂಬವು ಸಂಬಂಧಿಕರ ಮನೆಗಳಲ್ಲಿಯೂ ವಿಚಾರಣೆ ನಡೆಸಿದರೂ ತಕ್ಕ ಮಾಹಿತಿ ಸಿಕ್ಕಿಲ್ಲ.

ಈ ಹಿನ್ನೆಲೆಯಲ್ಲಿ ತಾಯಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಸಹಕಾರ ಕೋರಲಾಗಿದೆ.


ಕಾಣೆಯಾದ ಬಾಲಕಿ ವಿವರ:

? ಹೆಸರು: ನೀಲುಫರ್ ಬಿ

? ವಯಸ್ಸು: 15 ವರ್ಷ

? ವಿಳಾಸ: ಹೀರಾ ನಂದಿನಿ ಅಪಾರ್ಟ್ಮೆಂಟ್, ದೇವನಹಳ್ಳಿ

? ಮೊಬೈಲ್ ಸಂಖ್ಯೆ: 8971412663 (ಸಿಚ್ ಆಫ್)


ಯಾರಾದರೂ ಈ ಬಾಲಕಿ ಬಗ್ಗೆ ಮಾಹಿತಿ ಹೊಂದಿದ್ದರೆ ದಯವಿಟ್ಟು ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

Related posts