ಡಿಲಿವರಿ ಬಾಯ್ ಇಂದ ಲೈಂಗಿಕ ಕಿರುಕುಳದ ಮೆಸೇಜ್: ಪೊಲೀಸ್ ಪ್ರಕರಣ ದಾಖಲು
ನಗರದವರೊಬ್ಬರು ಆನ್‌ಲೈನ್ ಟ್ರ ಮೆಡ್ಸ್ ವೆಬ್‌ಸೈಟ್‌ನಲ್ಲಿ ಔಷಧಿ ಮಾತ್ರೆಗಳು ಆರ್ಡರ್ ಮಾಡಿದ ನಂತರ, ದಿನಾಂಕ 20-06-2025 ರಂದು ಡಿಲಿವರಿ ನೀಡಲು ಬಂದ ಡಿಲಿವರಿ ಬಾಯ್ ರಮೇಶ್ ರಡ್ಡಿ ಎಂಬಾತ ಮನೆಗೆ ಬೇಟಿ ನೀಡಿದ್ದನು. ಡಿಲಿವರಿ ವೇಳೆ ಈತ ಗ್ರಾಹಕರ ಮೊಬೈಲ್ ನಂಬರ್ ಪಡೆದು, ಅದೇ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗ್ರಾಹಕರಿಗೆ ಅವಾಚ್ಯ ಹಾಗೂ ಲೈಂಗಿಕ ಅರ್ಥ ಬರುವ ರೀತಿಯ “Hello baby”, “Baby” ಎಂಬ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ.
ಪೀಡಿತರು ಕೂಡಲೇ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ತನ್ನ ಮೊಬೈಲ್ ನಂಬರ್ 9972429057 ಗೆ 9148859319 ನಂಬರ್‌ನಿಂದ ಕಿರುಕುಳದ ಮೆಸೇಜ್ ಬಂದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತ ಡಿಲಿವರಿ ಬಾಯ್ ರಮೇಶ್ ರಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಪ್ರಾರಂಭಿಸಿದ್ದಾರೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

