ಹುಬ್ಬಳ್ಳಿ: ಆಸ್ಪತ್ರೆಯಿಂದ ಯುವಕ ಕಾಣೆಯಾದ ಪ್ರಕರಣ
ಹುಬ್ಬಳ್ಳಿ, ಜೂನ್ 25: ಹಳೇಹುಬ್ಬಳ್ಳಿ, ಹಿರೇಪೇಟೆ ಡಂಬಳದವರ ಚಾಳ ಮನೆ ನಂ: 90/1 ರಲ್ಲಿ ವಾಸಿಸುವ ಶ್ರೀನಿವಾಸ ಶಂಕ್ರಪ್ಪ ಬ್ಯಾಡಗಿ (ವಯಸ್ಸು 41) ಅವರು ಠಾಣೆಗೆ ದೂರು ನೀಡಿದ್ದು, ತಮ್ಮ ಚಿಕ್ಕಪ್ಪನ ಮಗ ಮಂಜುನಾಥ ಪುಂಡಲಿಕ ಬ್ಯಾಡಗಿ (ವಯಸ್ಸು 26), ಉದ್ಯೋಗ: ಸಾಫ್ಟ್‌ವೇರ್ ಇಂಜಿನಿಯರ್, ದಿನಾಂಕ 24-06-2025 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಹುಬ್ಬಳ್ಳಿಯ ಗೋಕುಲ್ ರೋಡ್‌ನ ಸುಚಿರಾಯು ಆಸ್ಪತ್ರೆಯಿಂದ ಯಾರಿಗೂ ಹೇಳದೆ ಹೊರಗೆ ಹೋಗಿ, ವಾಪಸ್ ಬಾರದೇ ಕಾಣೆಯಾದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತಿಳಿಸಲು ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ
ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್
9886063123

