ಹಿರಿಯ ವೈದ್ಯರಿಗೆ ಸಹೋದ್ಯೋಗಿಯಿಂದ ಕಿರುಕುಳ: ಪೊಲೀಸರಿಗೆ ದೂರು
ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯೆಯೊಬ್ಬರು ತಮ್ಮ ಹಳೆಯ ಸಹೋದ್ಯೋಗಿ ವಿರುದ್ಧ ನಿರಂತರ ಕಿರುಕುಳ ನೀಡಿರುವ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾಹುಲ್ ಶೆಟ್ಟಿ ರವರ ಪ್ರಕಾರ, ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಸೀನಿಯರ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ, ರೂಪಾ ಎಂಬುವವರು ಸಹ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸಂಬಂಧವಾಗಿ ರಾಹುಲ್ ಶೆಟ್ಟಿ ರವರ ಮೊಬೈಲ್ ನಂಬರ್ ಪಡೆದ ಬಳಿಕ, ರೂಪಾ ಅವರು ನಿರಂತರವಾಗಿ ಕರೆ ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದರೆಂದು ದೂರು ನೀಡಲಾಗಿದೆ.
ಮತ್ತು, ರೂಪಾ ಅವರು ವೈದ್ಯೆಯ ಮನೆಗೆ, ಕ್ಲಿನಿಕ್‌ಗೆ ಹಾಗೂ ಆಸ್ಪತ್ರೆಯವರೆಗೆ ಅನಧಿಕೃತವಾಗಿ ಬಂದು ಗಲಾಟೆ ಮಾಡುತ್ತಿದ್ದರೆಂದು ರಾಹುಲ್ ಶೆಟ್ಟಿಯವರು ತಿಳಿಸಿದ್ದಾರೆ. ಇದರಿಂದಾಗಿ ವೈದ್ಯೆಯ ಮಾನಸಿಕ ನೆಮ್ಮದಿ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬಿದ್ದಿದ್ದು, ಆರೋಗ್ಯಕ್ಕೂ ಹಾನಿಯಾಗಿರುವುದಾಗಿ ತಿಳಿಸಲಾಗಿದೆ.
ಅಲ್ಲದೆ, ರೂಪಾ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ, ದೂರುದಾರರ ಮೇಲೆ ತಪ್ಪು ಆರೋಪ ಹೊರಿಸುತ್ತಿರುವುದರಿಂದ ಅವರ ಕುಟುಂಬಕ್ಕೂ ತೊಂದರೆ ಉಂಟಾಗಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇದೀಗ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.


