ಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ.
ಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ.
ಬೆಂಗಳೂರು ನಗರದಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಸಂಭವಿಸಿದ ರಿಯಲ್ ಎಸ್ಟೇಟ್ ವಂಚನೆ ಪ್ರಕರಣ ಇದಾಗಿದ್ದು, ಬಾಲಕೃಷ್ಣ, ಮುನಿಕೃಷ್ಣ, ಮೇರಿ ಜಯಶ್ರೀ, ಮತ್ತು ರೆಬಿಕಾ ಪ್ಯಾಟ್ರಿಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ.
ಶ್ರೀ ಸ್ಯೆಡ್ ಇಬ್ರಾಹಿಂ ಪ್ರಕಾರ, ಬಾಲಕೃಷ್ಣ ಎಂಬಾತನು ಸ್ನೇಹಿತನೇನಿದು ಹೇಳಿ, 3066 ಚದರ ಅಡಿಯ ಕಮರ್ಷಿಯಲ್ ಜಾಗವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಸುತ್ತೇನೆಂದು ನಂಬಿಸಿ, ₹17 ಲಕ್ಷಕ್ಕೂ ಹೆಚ್ಚು ಹಣದ ವಂಚನೆ ನಡೆಸಿದ್ದಾನೆ. ಜಾಗವೊಂದರ ಹುದ್ದಿಗೆ ಮೇರಿ ಜಯಶ್ರೀ ಎಂಬುವರ ಹೆಸರಿನಲ್ಲಿ ಜಿಪಿಎ ಇತ್ತು ಎಂದು ತಿಳಿಸಿ, ಆ ಜಾಗದ ಖರೀದಿಗೆ ಹಲವು ಹಂತಗಳಲ್ಲಿ ಹಣ ಪಡೆದು, ಬಳಿಕ MOU ಒಪ್ಪಂದ ಪತ್ರವನ್ನೂ ನೀಡಲಾಗಿದೆ.
ಆದರೆ ಇತ್ತೀಚೆಗೆ ಬಹಿರಂಗವಾಗಿರುವ ಅಂಶವೇನೆಂದರೆ, ಈ ಜಾಗವನ್ನೇ ಮೇರಿ ಜಯಶ್ರೀ ಅವರ ಮಗಳು ರೆಬಿಕಾ ಪ್ಯಾಟ್ರಿಕ್ ಹೆಸರಿನಲ್ಲಿ ‘ರಿಲೀಸ್’ ಮಾಡಲಾಗಿದೆ! ಅಲ್ಲದೇ ಇನ್ನು ಇಬ್ಬರಿಗೆ ಜಮೀನು ನೊಂದಾಯಿಸಿ ಮಾರಾಟ ಮಾಡಿದ್ದಾರೆ ಎಂಬುವುದು ಶ್ರೀ ಸ್ಯೆಡ್ ನಿಬ್ರಾಹಿಂ ಆರೋಪ.
ಶ್ರೀ ಸ್ಟೆಡ್ ಇಬ್ರಾಹಿಂ ಅವರು , “ನಾನು ನಂಬಿದವರು ಹಣ ತೆಗೆದುಕೊಂಡು, ನನ್ನ ಜಾಗವನ್ನೇ ಇತರರ ಹೆಸರಿಗೆ ಮಾಡಿದ್ದಾರೆ. ಇದು ನೇರವಾಗಿ ನನಗೆ ಮಾಡಿದ ಮೋಸ!”
ಈ ಘಟನೆ ಕುರಿತಂತೆ ಇದೀಗ ಅಮೃತಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ವಿರುದ್ಧ IPC ಸೆಕ್ಷನ್‌ಗಳಡಿ ತನಿಖೆ ಆರಂಭವಾಗಿದೆ. ಈ ಪ್ರಕರಣವು ಇನ್ನಷ್ಟು ರೋಚಕ ತಿರುವು ಪಡೆಯಬಹುದೆಂಬ ನಿರೀಕ್ಷೆ.
ಸಾಮಾನ್ಯ ಪ್ರಜೆಗಳಿಗೆ ಎಚ್ಚರಿಕೆ: “ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲು ಯಾವುದೇ ಡಾಕ್ಯುಮೆಂಟ್‌ಗಳು, GPA, ಅಥವಾ MOUಗಳ ಬಗ್ಗೆ ಸಂಪೂರ್ಣ ಪರಿಶೀಲನೆ ಮಾಡದೇ, ನಂಬಿಕೆಯಿಂದ ಹಣ ಹೂಡಬೇಡಿ!” ಎಂದು ಅಮೃತಳ್ಳಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

