ಸುದ್ದಿ 

ನಾಗಮಂಗಲ : ಗಂಗನಹಳ್ಳಿಯ ಹಿರಿಯರಾದ ಜೆ.ವಿ. ತಿಮ್ಮೇಗೌಡರು ( ಚಿಕ್ಕಣ್ಣ) ಇನ್ನಿಲ್ಲ – ಕುಟುಂಬದಿಂದ ಶ್ರದ್ಧಾಂಜಲಿ ಸಭೆಗೆ ಆಹ್ವಾನ

Taluknewsmedia.com

ಗಂಗನಹಳ್ಳಿಯ ಹಿರಿಯರಾದ ಜೆ.ವಿ. ತಿಮ್ಮೇಗೌಡರು ( ಚಿಕ್ಕಣ್ಣ) ಇನ್ನಿಲ್ಲ – ಕುಟುಂಬದಿಂದ ಶ್ರದ್ಧಾಂಜಲಿ ಸಭೆಗೆ ಆಹ್ವಾನ

ಗಂಗನಹಳ್ಳಿಯ ಹಿರಿಯ ನಾಗರಿಕರು ಹಾಗೂ ಸಮುದಾಯದಲ್ಲಿ ಹೆಸರುವಾಸಿಯಾದ ಶ್ರೀ ಜೆ.ವಿ. ತಿಮ್ಮೇಗೌಡರು (ಚಿಕ್ಕಣ್ಣ) ಅವರು ದಿನಾಂಕ 21-06-2025 ರಂದು ನಿಧನರಾದರು. ಅವರು ತಮ್ಮ ಜೀವಿತಾವಧಿಯಲ್ಲಿ ಗ್ರಾಮ ಅಭಿವೃದ್ಧಿಗೆ ಶ್ರದ್ಧೆಯಿಂದ ಕೆಲಸಮಾಡಿದವರು. ಅವರ ನಿಧನದಿಂದ ಊರಿನಲ್ಲಿ ಶೋಕಚ್ಛಾಯೆ ನೆಲೆಸಿದೆ.

ಶ್ರೀ ತಿಮ್ಮೇಗೌಡರು ಅವರು ಬಹುಮಾನ್ಯ ವ್ಯಕ್ತಿತ್ವದವರು. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ನಿರಂತರ ಸೇವೆಯಿಂದ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು. ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಟಿ.ಬಿ.ಚನ್ನಮ್ಮರವರು ಹಾಗೂ ಮಕ್ಕಳು ಸೇರಿದಂತೆ ಸಮೃದ್ಧ ಕುಟುಂಬವನ್ನು ಅಗಲಿದ್ದಾರೆ.

ಶ್ರದ್ಧಾಂಜಲಿ ಹಾಗೂ ಉತ್ತರಕ್ರಿಯೆಯ ಕಾರ್ಯಕ್ರಮ

ಮೃತರ ಆತ್ಮಕ್ಕೆ ಶಾಂತಿ ಲಭಿಸಬೇಕೆಂಬ ಉದ್ದೇಶದಿಂದ ಶ್ರದ್ಧಾಂಜಲಿ ಸಭೆ ಹಾಗೂ ಉತ್ತರಕ್ರಿಯೆಯ ಕಾರ್ಯಕ್ರಮವನ್ನು ಅವರ ಪುತ್ರ ಶ್ರೀ ಜೆ.ವಿ. ಶಾಂತಕುಮಾರ ಹಾಗೂ ಕುಟುಂಬದ ಸದಸ್ಯರು ಅವರಿಂದ ದಿನಾಂಕ 01-07-2025 ರಂದು ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ ಗಂಗನಹಳ್ಳಿ ಗ್ರಾಮ ಮೃತ್ತರ ಸ್ಥಳದಲ್ಲಿ ಆಯೋಜಿಸಲಾಗಿದೆ.

Related posts