ಸುದ್ದಿ 

ಅತ್ತಿಬೆಲೆ ಸರ್ಕಲ್‌ನಲ್ಲಿ 13 ವರ್ಷದ ಬಾಲಕ ನಿಥಿನ್ ಕಾಣೆಯಾದ ಘಟನೆ – ಪೋಷಕರ ಆತಂಕ

Taluknewsmedia.com

ನಗರದ ಅತ್ತಿಬೆಲೆ ಸರ್ಕಲ್ ಬಳಿ 13 ವರ್ಷದ ಬಾಲಕ ನಿಥಿನ್ ಎಂಬವರು ಶಂಕಾಸ್ಪದ ರೀತಿಯಲ್ಲಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಿಥಿನ್ ಜಯಭಾರತಿ ಸರ್ಕಾರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಪ್ರತಿದಿನದಂತೆ ದಿ. 22/06/2025 ರಂದು ಶಾಲೆಯಿಂದ ಮನೆಗೆ ಬರುವ ಸಂದರ್ಭ ಸಂಜೆ 5:30ರ ವೇಳೆಗೆ ತನ್ನ ತಾಯಿಯೊಂದಿಗೆ ನಡೆದುಕೊಂಡು ಬರುತ್ತಿದ್ದಾಗ, ಅತ್ತಿಬೆಲೆ ಸರ್ಕಲ್ ಬಳಿ ಏಕಾಏಕಿ ಕಾಣೆಯಾಗಿದ್ದಾನೆ.

ಪೋಷಕರು ತಮ್ಮ ಮಗನನ್ನು ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೋಷಕರ ಪ್ರಕಾರ, ನಿಥಿನ್ ನೋಡಲು ಎಣ್ಣೆ ಗೆಂಪು ಮೈಬಣ್ಣ ಹೊಂದಿದ್ದು, ಸುಮಾರು 4 ಅಡಿ ಎತ್ತರವಿದೆ. ಆತನಿಗೆ ಕಪ್ಪು ಕೂದಲು ಇದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಕಂಡುಹಿಡಿಯುವ ಪ್ರಮುಖ ಲಕ್ಷಣವೆಂದರೆ, ನಿಥಿನ್‌ನ ಮುಂಭಾಗದ ಮೇಲಿನ ಹಲ್ಲು ಅರ್ಧ ಮುರಿದಿರುತ್ತದೆ.

ಕಾಣೆಯಾದಾಗ ನಿಥಿನ್ ನೀಲಿ ಬಣ್ಣದ ಗೆರೆ-ಗೆರೆ ಶರ್ಟ್ ಹಾಗೂ ಕ್ರೀಂ ಬಣ್ಣದ ಪ್ಯಾಂಟ್ ಧರಿಸಿಕೊಂಡಿದ್ದನು.

ಈ ಸಂಬಂಧ ವನ್ನು ಅತ್ತಿಬೆಲೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ಕಾರ್ಯ ಆರಂಭವಾಗಿದೆ. ಸಾರ್ವಜನಿಕರಿಗೆ ನಿಥಿನ್ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಸ್ಥಳೀಯ ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Related posts