ಸುದ್ದಿ 

ಸೈಬರ್ ವಂಚನೆ: ಗಾರ್ಡನ್ ಸಾಧನ ಖರೀದಿ ನೆಪದಲ್ಲಿ ₹90,000 ಕಸಿದುಕೊಂಡ ಸೈಬರ್ ಅಪರಾಧಿಗಳು

Taluknewsmedia.com

ನಗರದ ನಿವಾಸಿಯೊಬ್ಬರು ಇತ್ತೀಚೆಗೆ ಗಾರ್ಡನ್ ಸಾಧನ ಖರೀದಿಸಲು ಪ್ರಯತ್ನಿಸುತ್ತಿದ್ದ ವೇಳೆ ಸೈಬರ್ ವಂಚನೆಯ ಬಲಿಯಾಗಿದ್ದಾರೆ. “Ship Streak Costing” ಎಂಬ ಸಂಸ್ಥೆಯ ಹೆಸರಿನಲ್ಲಿ ಪೂರೈಕೆ ಮಾಡುವಂತಾದ ಜಾಲತಾಣ ಅಥವಾ ಜಾಹೀರಾತು ವೀಕ್ಷಿಸಿದ ಸುಭಾಶ್, ನೀಡಲಾದ ಗ್ರಾಹಕ ಸೇವಾ ಸಂಖ್ಯೆಗೆ ಕರೆಮಾಡಿದಾಗ ವಂಚಕರು ಅವರು ಹೇಳಿದ ಪಾವತಿ ಲಿಂಕ್ ಮೂಲಕ ₹2/- ಮೊತ್ತ ಪಾವತಿಸುವಂತೆ ಸೂಚಿಸಿದರು.

ಆದರೆ, ಪಾವತಿ ಪ್ರಕ್ರಿಯೆ ಬಳಿಕ ಸುಭಾಷ್ ರವರ ಖಾತೆಯಿಂದ ಅಕ್ರಮವಾಗಿ ₹90,000/- ಹಣವನ್ನು ವಂಚಕರು ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಪೀಡಿತರು ತಕ್ಷಣವೇ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ.

ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ: “ಇದು ಪೂರ್ತಿಯಾಗಿ ನಕಲಿ ಗ್ರಾಹಕ ಸೇವಾ ಸಂಖ್ಯೆಯ ಮೂಲಕ ನಡೆಯುತ್ತಿರುವ ಉದ್ದೇಶಿತ ಸೈಬರ್ ವಂಚನೆಯಾಗಿದೆ. ಬ್ಯಾಂಕ್ ಖಾತೆ ವಿವರ ಮತ್ತು OTP ಸಂಗ್ರಹಿಸುವ ಮೂಲಕ ಹಣವನ್ನು ಲಪಟಾಯಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ.

ಯಾವಾಗಲೂ ಅಧಿಕೃತ ವೆಬ್‌ಸೈಟ್ ಅಥವಾ ಆಪ್‌ಗಳ ಮೂಲಕವೇ ಖರೀದಿ ಮಾಡಬೇಕು.

ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು.

ಕಸ್ಟಮರ್ ಕೇರ್ ಹೆಸರಿನಲ್ಲಿ ಬರುವ ಸಂದೇಶ ಅಥವಾ ಕರೆಗಳಿಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು.
ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತತೆಯ ಅಗತ್ಯವಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Related posts