ಸುದ್ದಿ 

ಕ್ರಿಕೆಟ್ ಆಟದ ವೇಳೆ 11 ವರ್ಷದ ಬಾಲಕನಿಗೆ ತಲೆಗೆ ತೀವ್ರ ಗಾಯ: ಅನಂತಪುರದಲ್ಲಿ ಘಟನೆ

Taluknewsmedia.com

ಅನಂತಪುರದ ಡಿಯೋಮಾರ್ ವೆಲ್ ಲೇಔಟ್‌ನಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಮಯದಲ್ಲಿ ಅಜಾಗರೂಕತೆಯಿಂದ ಬ್ಯಾಟ್ ಬೀಸಿದ ಪರಿಣಾಮ, 11 ವರ್ಷದ ಬಾಲಕನ ತಲೆಗೆ ತೀವ್ರವಾಗಿ ಗಾಯವಾದ ಘಟನೆ ನಡೆದಿದೆ.

ಘಾಯಗೊಂಡ ಬಾಲಕ ಸಮನೆ (11) ಯಲಹಂಕದ ಚೈತನ್ಯ ಟಿಕೆ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದು, ದಿನಾಂಕ 25/06/2025 ರಂದು ಸಂಜೆ 5 ಗಂಟೆಗೆ ಕ್ರಿಕೆಟ್ ಆಡಲು ಸ್ಥಳೀಯ ಮೈದಾನಕ್ಕೆ ಹೋಗಿದ್ದ. ಆಟದ ವೇಳೆ ಗೋವರ್ಧನ್ ಎಂಬ ಯುವಕ ಅಜಾಗರೂಕತೆಯಿಂದ ಬ್ಯಾಟ್ ಬೀಸಿದಾಗ, ಪಕ್ಕದಲ್ಲಿದ್ದ ಸಮನೆನ ತಲೆಗೆ ಬ್ಯಾಟ್ ಬಡಿದಿದೆ.

ಗಾಯಗೊಂಡ ಬಾಲಕನನ್ನು ತಕ್ಷಣ ಸ್ಥಳೀಯರು ಮನೆಗೆ ಕರೆದುಕೊಂಡು ಹೋಗಿ, ತಾಯಿ ಅವರನ್ನು ಕೂಡ ಕರೆಸಿ ಕೆ.ಕೆ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಆರ್ಸ್ಟ ಆಸ್ಪತ್ರೆ, ಕೊಡಿಗೇಹಳ್ಳಿ ಗೇಟ್ಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಚಿಕ್ಕ ವೆಂಕಟಮ್ಮ ಈ ಸಂಬಂಧ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಅಜಾಗರೂಕತೆಯಿಂದ ಆಟವಾಡಿ, ಪಕ್ಕದವರ ಜೀವಕ್ಕೆ ಅಪಾಯ ತಂದಿರುವ ಗೋವರ್ಧನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ದೂರು ನೀಡಿದ್ದಾರೆ.

ಯಲಹಂಕ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts