ಸುದ್ದಿ 

ವಿದ್ಯಾರಣ್ಯಪುರ ರಸ್ತೆ ಅಪಘಾತ: ಅಜಾಗರೂಕ ಬೈಕ್ ಸವಾರ ಡಿಕ್ಕಿ – ಮಹಿಳೆಗೆ ತೀವ್ರ ಗಾಯ

Taluknewsmedia.com

ವಿದ್ಯಾರಣ್ಯಪುರ ನ್ಯೂ ರೋಡ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಲಹಂಕ ಸಂಚಾರ ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ತಮಿಳುನಾಡು ನೋಂದಣಿಯ TN-05 CP-4123 ನಂಬರಿನ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ ನ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದ ವೇಳೆ, ಸಂತೋಷಿ ಸ್ಕೂಟರ್ (ನಂ. KA-41 ES-9144SS) ಗೆ ಎಡಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದಲ್ಲಿ ಸ್ಕೂಟರ್ ಸವಾರ ಮಹಿಳೆ ಸಮಂತಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಾಲಿನ ಮೂಳೆ ಮುರಿದಿದೆ. ಸ್ಥಳೀಯರು ತಕ್ಷಣವೇ ಅವರನ್ನು ನಿಕಟದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕಲ್ಪಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಗುರುಮೂರ್ತಿ ಅವರ ನೆರವಿನಿಂದ ಆಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಒಯ್ಯಲಾಯಿತು.

ಅಪಘಾತಕ್ಕೆ ಕಾರಣನಾದ ಬೈಕ್ ಸವಾರನ ವಿರುದ್ಧ ಯಲಹಂಕ ಸಂಚಾರಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರ ಸೂಚನೆ: ವಾಹನ ಚಲಾಯಿಸುವಾಗ ವೇಗ ನಿಯಂತ್ರಿಸಿ, ಇತರ ವಾಹನಚಾಲಕರಿಗೆ ಜಾಗೃತಿ ವಹಿಸಿ. ಅಜಾಗರೂಕ ಚಾಲನೆಯು ಜೀವಕ್ಕೆ ಅಪಾಯಕಾರಿಯಾಗಬಹುದು

Related posts