ಮನೆ ಬಾಡಿಗೆದಾರರ ವಿರುದ್ಧ ಬೆದರಿಕೆ ಹಾಗೂ ಬೆಲೆಬಾಳುವ ವಸ್ತುಗಳ ಕಳವು ಆರೋಪ: ಕಾನೂನು ಕ್ರಮಕ್ಕೆ ದೂರು
ಅಮುದ ಅವರು ಭೋಗ್ಯಕ್ಕೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಮನೆ ಮಾಲೀಕರಾದ ಹರೀಶ್ ಮತ್ತು ಅವರ ತಾಯಿ ಪ್ರೇಮ ಅವರ ವಿರುದ್ಧ ಗಂಭೀರ ಆರೋಪಗಳನ್ನು ದಾಖಲಿಸಿದ್ದಾರೆ. ಶ್ರೀಮತಿ ಅಮುದ ಅವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಭೋಗ್ಯಕ್ಕೆ ವಾಸವಿದ್ದು, ದಿನಾಂಕ 23/06/2025 ರಂದು ಸಂಜೆ 5:00 ರಿಂದ 5:30ರ ನಡುವಿನ ಸಮಯದಲ್ಲಿ, ಅವರು ಕೆಲಸದಲ್ಲಿರುವಾಗ ಮನೆಗೆ ಸಂಬಂಧಿಸಿದ ಬೆಲೆಬಾಳುವ ವಸ್ತುಗಳನ್ನು ಮನೆಯ ಮಾಲೀಕರು ಮನೆಯಿಂದ ತೆಗೆದು ಹೊರಗೆ ಹಾಕಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾವು ವಾಸಿಸುತ್ತಿದ್ದ ಮನೆಯಲ್ಲಿದ್ದ: ಬೆಳ್ಳಿ — ಸುಮಾರು 750 ಗ್ರಾಂ ನಗದು — ₹9,000/- ವೈಯಕ್ತಿಕ ದಾಖಲೆಗಳು ಮತ್ತು ಪೂಜೆ ಸಂಬಂಧಿತ ಬೆಲೆಬಾಳುವ ವಸ್ತುಗಳು ಇವುಗಳನ್ನು ಮನೆಯ ಮಾಲೀಕರು ಮನೆಯಿಂದ ಹೊರಗೆ ಹಾಕಿರುವುದಾಗಿ ಅವರು ದೂರಿನಲ್ಲಿ ಹೇಳಿದ್ದಾರೆ.
ಅಮುದ ಅವರು ಈ ಘಟನೆಯ ಬಗ್ಗೆ ಸ್ಪಷ್ಟತೆ ಕೇಳಲು ಹೋಗಿದಾಗ, ಮಾಲೀಕರು ಅವರಿಗೆ ನಿಂದನೆ ಮತ್ತು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದು, “ಈ ಬಿಲ್ಡಿಂಗ್ ನಲ್ಲಿ ಇದ್ದರೆ ನಿನ್ನ ಜೀವ ತೆಗೆದುಬಿಡುತ್ತೇನೆ” ಎಂಬ ರೀತಿಯಲ್ಲಿ ಜೀವ ಬೆದರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅಮುದ ಅವರ ಗಂಡ ಹಾಗೂ ಮಕ್ಕಳಿಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧಿತ ತನಿಖೆ ಪ್ರಾರಂಭಗೊಂಡಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

