ಸುದ್ದಿ 

ತುಮಕೂರು ರಸ್ತೆಯಲ್ಲಿ 70 ವರ್ಷದ ಪುರುಷನಿಗೆ ಸ್ಕೂಟರ್ ಡಿಕ್ಕಿ – ಆಸ್ಪತ್ರೆಗೆ ದಾಖಲಾದ ಹಿರಿಯ ನಾಗರೀಕ

Taluknewsmedia.com

ತುಮಕೂರು ರಸ್ತೆಯ ಸೌಂದರ್ಯ ಹೋಟೆಲ್ ಬಳಿ ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ 70 ವರ್ಷದ ಹಿರಿಯ ನಾಗರಿಕರಿಗೆ ಗಂಭೀರ ಗಾಯವಾಗಿದೆ. ಅಪಘಾತ ಪೀಡಿತರಾಗಿರುವವರು ಶ್ರೀ ಸಲೀಂ ಲಾಲಾ ಬಿನ್ ಹಾಜಿ ಕರೀಂ ರವರು, ತಮ್ಮ ದಿನಚರಿ ಯಂತೆ ಟಿ.ದಾಸರಹಳ್ಳಿ ಮೆಟ್ರೋ ಸ್ಟೇಷನ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ, ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಿಸುತ್ತಿದ್ದ ಸ್ಕೂಟರ್ ನಂ KA-51-JG-4760 ಅವರ ಮೇಲೆ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ಅವರು ರಸ್ತೆಗೆ ಬಿದ್ದು ಬಲಗಾಲು, ಸೊಂಟ, ಬಲಗೈ ಬೆರಳುಗಳು ಹಾಗೂ ಕಿವಿಗೆ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಸಾರ್ವಜನಿಕರ ಸಹಾಯದಿಂದ ಅವರನ್ನು ಹತ್ತಿರದ ರಾಘವೇಂದ್ರ ಪೀಪಲ್ ಶ್ರೀ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ Shifaa Hospital ಗೆ ಸ್ಥಳಾಂತರ ಮಾಡಲಾಗಿದೆ.

ಆಶ್ಚರ್ಯಕರ ವಿಷಯವೇನೆಂದರೆ ಅಪಘಾತ ಮಾಡಿದ್ದ ಸ್ಕೂಟರ್ ಸವಾರ ಯಾವುದೇ ರೀತಿಯ ಸಹಾಯ ನೀಡದೆ ಸ್ಥಳದಿಂದ ಹೊರಟಿದ್ದಾನೆ. ಗಾಯಗೊಂಡ ಶ್ರೀ ಸಲೀಂ ರವರು ತಮ್ಮ ಮಗ ಜಾಪರ್ ಲಾಲ್ ಹಾಗೂ ವೈದ್ಯರ ಸಮ್ಮುಖದಲ್ಲಿ ನೀಡಿದ ಹೇಳಿಕೆಯಲ್ಲಿ, ಸವಾರನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

Related posts