ಬಿಬಿ ಸರ್ವಿಸ್ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯು ಮತ್ತು ಪುಟಪಾತ್ ಅನ್ನು ಆವರಿಸಿಕೊಂಡ ಗ್ಯಾರೇಜ್ – ಸಾರ್ವಜನಿಕರಿಗೆ ತೀವ್ರ ಅಡಚಣೆ
ಬೆಂಗಳೂರು, 28 ಜೂನ್ 2025:
ನಗರದ ಬಿಬಿ ಸರ್ವಿಸ್ ರಸ್ತೆಯ ರೈತ ಸಂತೆಯ ಬಸ್ ನಿಲ್ದಾಣದಿಂದ ಕೋಗಿಲು ಕ್ರಾಸ್ ಸಿಗ್ನಲ್ ತನಕ ಇರುವ ಸಾರ್ವಜನಿಕ ರಸ್ತೆಯ ಮೇಲೆ ಮತ್ತು ಪುಟಪಾತ್ ನಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸಿ ದುರಸ್ತಿಗೆ ಹಾಕುತ್ತಿರುವ ವಿ.ಎಚ್ ಕಾರ್ ಗ್ಯಾರೇಜ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಬ್ರಾ ಗಸ್ತು ಕರ್ತವ್ಯದಲ್ಲಿ ನೇಮಿಸಲಾದ ಯಲಹಂಕ ಸಂಚಾರಿ ಪೊಲೀಸ್ ಸಿಬ್ಬಂದಿ ಅವರು ಸಂಜೆ 6.15ರ ಸುಮಾರಿಗೆ ಗಸ್ತು ಮಾಡುತ್ತಿದ್ದಾಗ ಈ ಅಕ್ರಮ ದೃಶ್ಯ ಕಂಡುಬಂದಿದೆ. ಗ್ಯಾರೇಜ್ ಮಾಲೀಕರು ಸಾರ್ವಜನಿಕ ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ವ್ಯಾಪಿಸಿಕೊಂಡು ದುರಸ್ತಿ ಕಾರ್ಯ ನಡೆಸುತ್ತಿದ್ದು, ಇದು ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಯಲಹಂಕ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಾರದಂತೆ ಗ್ಯಾರೇಜ್ ಮಾಲೀಕರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದ್ದು, ನೋಟಿಸ್ ಸಹ ನೀಡಲಾಗಿದೆ. ಆದರೂ ಯಾವುದೇ ಬದಲಾವಣೆ ಆಗದೆ, ಸಾರ್ವಜನಿಕರಿಗೆ ಮತ್ತು ವಾಹನಚಾಲಕರಿಗೆ ದಿನನಿತ್ಯ ತೊಂದರೆ ಉಂಟಾಗುತ್ತಿದೆ.
ಪಾದಚಾರಿ ಹಕ್ಕು ಮತ್ತು ರಸ್ತೆ ಸುರಕ್ಷತೆಯನ್ನು ಲಂಗಣಿಸಿದ ಆರೋಪದ ಮೇಲೆ ಗ್ಯಾರೇಜ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗಿದೆ.


