ಸುದ್ದಿ 

ವಕೀಲೆಯ ವಿರುದ್ಧ ಜಾತಿ ನಿಂದನೆ, ಮಾನಹಾನಿ ಹಾಗೂ ಬ್ಲಾಕ್‌ಮೇಲ್ ಮೂರು ಮಹಿಳೆಯರ ವಿರುದ್ಧ ದೂರು

Taluknewsmedia.com

ಬೆಂಗಳೂರು, ಜುಲೈ 3 : 2025

ನಗರದ ಪ್ರಖ್ಯಾತ ವಕೀಲೆಯಾಗಿರುವ ಶ್ರೀಮತಿ ಜಿ. ತೇಜಸ್ವಿನಿ ಅವರು ತಮ್ಮ ಮೇಲೆ ನಡೆದಿರುವ ಜಾತಿ ನಿಂದನೆ, ಮಾನಹಾನಿ, ಮತ್ತು ಹಣದ ಬೇಡಿಕೆ ಹಾಗೂ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಮತಿ ಕೀರ್ತಿ ಎಸ್. ಸರಸ್ವತಿ, ಅವರ ತಾಯಿ ಸ್ವಾತಿ ಸುರೇಶ್, ಮತ್ತು ಮತ್ತೊಬ್ಬರು ಸಾವಿತ್ರಿ ಮೂರ್ತಿ ಎಂಬವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೊಡಿಗೆಹಳ್ಳಿ ಪೊಲೀಸ್ ದೂರು ದಾಖಲಿಸಿದ್ದಾರೆ.

ತೇಜಸ್ವಿನಿ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ವಕೀಲ ವೃತ್ತಿಯಲ್ಲಿ ವಾದ ಪ್ರಾರಂಭಿಸಿದ ಬಳಿಕ, 2024ರ ಅಕ್ಟೋಬರ್ 24ರಂದು ಶ್ರೀಮತಿ ಕೀರ್ತಿ ಅವರ ಪರವಾಗಿ ಎಂ.ಸಿ. ನಂ-1505/2020ರಲ್ಲಿ ಕೋರ್ಟ್‌ನಲ್ಲಿ ವಕಾಲತ್ ಹಾಕಿದ್ದರು. ಅವರು ಅವರು ಕೇಸಿನಲ್ಲಿ ಕೆಲವೊಂದು ಅರ್ಜಿಗಳನ್ನು ಸಲ್ಲಿಸಿ, ಕ್ರಿಮಿನಲ್ ಕೇಸ್ ವಾಪಸ್ ಪಡೆಯಲು ಸಹಾಯ ಮಾಡಿದ್ದರು. ಅವರ ಆರೋಗ್ಯದ ದೃಷ್ಟಿಯಿಂದ ಧ್ಯಾನ ಮಾಡಬೇಕು, ಪೆರ್ಸನಲ್ ಆಗಿ ಮುಂದೆ ಸಾಗಬೇಕು ಎಂಬ ಸಲಹೆ ಕೂಡ ನೀಡಿದ್ದರು.

ಆದರೆ, ಬಳಿಕ ಕೀರ್ತಿ ಅವರು ತೇಜಸ್ವಿನಿ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ವಿಷಯ ತಿಳಿದು, ಅವರ ವಿರುದ್ಧ ನಿರಂತರವಾಗಿ ಜಾತಿ ನಿಂದನೆ, ಅವಹೇಳನಾತ್ಮಕ ಭಾಷೆ, ಮಾನಹಾನಿಕರ ಟೀಕೆಗಳು ಮಾಡುತ್ತಿದ್ದರೆಂದು ದೂರಿನಲ್ಲಿ ವಿವರಿಸಲಾಗಿದೆ. ಜೂನ್ 18 ರಂದು ಅವರು ಮತ್ತು ಅವರ ತಾಯಿ ತೇಜಸ್ವಿನಿಯವರ ಕಚೇರಿಗೆ ಬಂದು, ಕೇಸ್ ಡಾಕ್ಯುಮೆಂಟ್‌ಗಳನ್ನು ಹಿಂಪಡೆಯುವ ನೆಪದಲ್ಲಿ “ನೀವು ನನ್ನಿಗೆ ₹10 ಲಕ್ಷ ಕೊಡಿ, ಇಲ್ಲವಾದರೆ ಗೂಗಲ್ ರಿವ್ಯೂಗಳಲ್ಲಿ ಕೆಟ್ಟದಾಗಿ ಬರೆದು ನಿಮ್ಮ ವೃತ್ತಿಜೀವನವನ್ನು ಹಾಳು ಮಾಡುತ್ತೇವೆ” ಎಂದು ಬೆದರಿಸಿದ್ದಾರೆ.

ಅದರ ಜೊತೆಗೆ, ಡಾ. ಬಿ. ಆರ್. ಅಂಬೇಡ್ಕರ್ ಅವರ ಫೋಟೋವನ್ನೆ ತೋರಿಸಿ ತೇಜಸ್ವಿನಿ ಅವರ ಜಾತಿಗೆ ಅವಮಾನ ಮಾಡಿರುವುದಾಗಿ ಹಾಗೂ “ನಿನಗೆ ಈ ಜಾತಿಗೆ ಸೇರಿದವಳಾಗಿ ವಕೀಲರಾಗೋ ಯೋಗ್ಯತೆಯೇ ಇಲ್ಲ” ಎಂಬ ರೀತಿಯಲ್ಲಿ ನಿಂದಿಸಿದ್ದಾರೆ ಎಂಬುದು ದೂರಿನ ಅಂಶ.

ಈ ಸಮಯದಲ್ಲಿ ಕಚೇರಿಯಲ್ಲಿ ಅರವಿಂದನ್ ಹಾಗೂ ವಿಜಯೇಂದ್ರ ರಾವ್ ಎಂಬ ಇಬ್ಬರು ಸಾಕ್ಷಿಗಳಿದ್ದರು ಎಂದು ಅವರು ಹೇಳಿದ್ದಾರೆ.

Related posts