ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಯುವತಿ ಅನನ್ಯಾ ಕಾಣೆಯಾಗಿದ್ದಾಳೆ ಪೋಷಕರಿಂದ ಪೊಲೀಸ್ ದೂರು
ಚಿಕ್ಕಜಾಲ, ಜುಲೈ 2 2025
ಚಿಕ್ಕಜಾಲದ ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿ ಅನನ್ಯಾ ನಿನ್ನೆ ಕೆಲಸಕ್ಕೆ ಹೋಗಿ ವಾಪಸ್ ಬಾರದ ಹಿನ್ನೆಲೆ, ಪೋಷಕರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಜಾಲ ಪೋಲೀಸರು ಪಡೆದ ಮಾಹಿತಿಯ ಪ್ರಕಾರ, ಅನನ್ಯಾ ಮೂರು ವರ್ಷಗಳ ಹಿಂದೆ ಪಿ.ಯು.ಸಿ ಪೂರ್ಣಗೊಳಿಸಿದ ನಂತರ ಉದ್ಯೋಗವನ್ನು ನಿರ್ವಹಿಸುತ್ತಿದ್ದು, ಅಂಜಿನಪ್ಪ ಮತ್ತು ಹೆಂಡತಿ ಇಬ್ಬರು ಮಕ್ಕಳೊಂದಿಗೆ ಚಿಕ್ಕಜಾಲದಲ್ಲಿ ವಾಸವಿದ್ದಾರೆ. ದಿನಾಂಕ 27/06/2025ರಂದು ಬೆಳಿಗ್ಗೆ 09:00 ಗಂಟೆಗೆ ಉದ್ಯೋಗಕ್ಕಾಗಿ ಮನೆಯಿಂದ ಎಸ್‌ಬಿಐ ಬ್ಯಾಂಕ್‌ಗೆ ತೆರಳಿದ್ದಳು. ಆದರೆ, ಆ ದಿನ ಸಂಜೆ 07:00 ಗಂಟೆಯವರೆಗೂ ಮನೆಗೆ ವಾಪಸ್ ಬಾರದಿದ್ದಳು.
ಅಂಜನಪ್ಪ ತಕ್ಷಣವೇ ಬ್ಯಾಂಕ್‌ಗೆ ಭೇಟಿ ನೀಡಿ ಮ್ಯಾನೇಜರ್‌ರನ್ನು ಸಂಪರ್ಕಿಸಿದಾಗ, “ಅವಳು ಕೆಲಸ ಮುಗಿಸಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದಳು” ಎಂಬ ಮಾಹಿತಿಯನ್ನು ನೀಡಲಾಗಿದೆ. ಬಳಿಕ ಪೋಷಕರು ಎಲ್ಲೆಲ್ಲೂ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ ಅವರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅನನ್ಯಾಳ ಪತ್ತೆ ಮಾಡುವಂತೆ ಹಾಗೂ ಸೂಕ್ತ ತನಿಖೆ ಕೈಗೊಳ್ಳುವಂತೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಯುವತಿಯ ಪತ್ತೆಗಾಗಿ ಪೌರಜನರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


