ಸುದ್ದಿ 

ಆನ್‌ಲೈನ್ ವಂಚನೆ: ಸಾಫ್ಟ್‌ವೇರ್ ಇಂಜಿನಿಯರ್‌ಗೆ ₹2.37 ಲಕ್ಷ ನಷ್ಟ

Taluknewsmedia.com

ಬೆಂಗಳೂರು ಜುಲೈ 2 2025

ಬೆಂಗಳೂರು ನಗರದ ನಿವಾಸಿಯಾಗಿರುವ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಪಿಪ್‌ಕಾರ್ಟ್ ಎಂಬ ಕಂಪನಿಯ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವ ವೇಳೆ ಆನ್‌ಲೈನ್ ವಂಚಕರಿಗೆ ₹2.37 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಕಾವ್ಯ ಎಮ್ ರ್ ನೀಡಿದ ದೂರಿನ ಪ್ರಕಾರ, ಜೂನ್ 28ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಅವರು ಪಿಪ್‌ಕಾರ್ಟ್ ಗ್ರಾಹಕ ಸೇವೆಗೆ ಕರೆ ಮಾಡಿದಾಗ, ಕರೆ ಉತ್ತರಿಸಿದ ವ್ಯಕ್ತಿ “ಸ್ಕ್ರೀನ್ ಶೇರ್” ಮಾಡಲು ತಿಳಿಸಿದ್ದ. ಈ ವೇಳೆಯಲ್ಲಿ, ಕಾವ್ಯ ಅವರ ಮೊಬೈಲ್ ಮೂಲಕ ₹91,000 ಮತ್ತು ₹6,501 ರುಪಾಯಿಯನ್ನು ವಂಚಕರು ಕದಿದುಕೊಂಡು ಹೋಗಿದ್ದಾರೆ. ನಂತರ ಮತ್ತೆ ₹1,37,000 ರುಪಾಯಿಯನ್ನು ನೆಟ್‌ಬ್ಯಾಂಕಿಂಗ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಒಟ್ಟಾರೆ ₹2,37,000 ರಷ್ಟು ಮೊತ್ತವನ್ನು ವಂಚಕರು ಹಗರಣದ ಮೂಲಕ ಪಡೆದುಕೊಂಡಿದ್ದಾರೆ.

ಈ ಕುರಿತು ತಕ್ಷಣವೇ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಇಂತಹ ಆನ್‌ಲೈನ್ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು ಎಂದು ಚಿಕ್ಕಜಾಲ ಪೊಲೀಸರು ತಿಳಿಸಿದ್ದಾರೆ.

Related posts